Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಹೊಸ ನ್ಯಾಯಬೆಲೆ ಅಂಗಡಿಗೆ ಅರ್ಜಿ ಆಹ್ವಾನ

0

 

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಗಂಜಿಗಟ್ಟೆ, ಚಿಕ್ಕಹಾಲಘಟ್ಟ, ಮೇಗಳಹಳ್ಳಿ, ಮಲ್ಲಾಪುರ ಗೊಲ್ಲರಹಟ್ಟಿ(ಮುತ್ತಯ್ಯನಹಟ್ಟಿ, ಪಿಳ್ಳೆಕರನಹಳ್ಳಿ ಒಳಗೊಂಡಂತೆ), ಹುಲ್ಲೂರು ನಾಯಕರಹಟ್ಟಿ, ವಿಜಾಪುರ ಗೊಲ್ಲರಹಟ್ಟಿ, ಓಒವ್ವನಾಗತಿಹಳ್ಳಿ, ತುರೇಬೈಲು ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರಯುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಪೆಂಬರ್ 22 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಆಸಕ್ತರು ನಿಯಮಾನುಸಾರ ನಿಗಧಿತ ನಮೂನೆ-ಎ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಚಿತ್ರದುರ್ಗ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಿಗೆ  ಸಲ್ಲಿಸಬಹುದು. ನಿಗದಿತ ಅವಧಿಯ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ನಿಯಮಾನುಸಾರ ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮ, ಸಂಸ್ಥೆ, ಗ್ರಾಮ ಹಾಗೂ ಸ್ಥಳೀಯ ಪಂಚಾಯಿತಿಗಳು, ಕೃಷಿ ಪತ್ತಿನ, ತೋಟಗಾರಿಕೆ, ಪ್ರಾಥಮಿಕ ಬಳಕೆದಾರರು, ಆದಿವಾಸಿ, ನೇಕಾರ, ಮಹಿಳಾ, ಅಂಗವಿಕಲ ಸೇರಿದಂತೆ ವಿವಿಧ ಸಹಕಾರಿ ಸಂಘಗಳು, ಸ್ತ್ರೀ ಶಕ್ತಿ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು.  ಅರ್ಜಿ ಸಲ್ಲಿಸುವ ಸಹಕಾರಿ ಸಂಘಗಳು ಕನಿಷ್ಠ 3 ವರ್ಷದ ಹಿಂದೆ ನೋಂದಾಯಿತರಾಗಿರಬೇಕು. ಕನಿಷ್ಠ ರೂ.2 ಲಕ್ಷರೂಪಾಯಿಗಳ ಬ್ಯಾಂಕ್ ಮೊತ್ತ ಬ್ಯಾಲೆನ್ಸ್ ಹೊಂದರಬೇಕು. ಇದೇ ಮಾದರಿಯಲ್ಲಿ ಸ್ತ್ರೀ ಸಹಾಯ ಸಂಘಗಳು ರೂ.1 ಲಕ್ಷ ಹಾಗೂ ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಕನಿಷ್ಠ ರೂ.50 ಸಾವಿರ ಬ್ಯಾಂಕ್ ಠೇವಣಿ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಹತ್ತನೇ ತರಗತಿ ಪಾಸಾಗಿರಬೇಕು. (ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಮಾತ್ರ), ಸಹಕಾರ ಸಂಘ, ಸಂಸ್ಥೆಗಳ ಮತ್ತು ಸ್ವಸಹಾಯ ಸಂಘಗಳಾದರೆ ನೋಂದಾವಣೆ ಪತ್ರ, ಸಹಕಾರ ಸಂಘ ಸಂಸ್ಥೆಯಾದರೆ ಕಳೆದ 3 ವರ್ಷಗಳ ದೃಢೀಕೃತ ಲೆಕ್ಕ ಪರಿಶೋಧನಾ ವರದಿ, ಬೈಲಾ, ಪ್ರತನಿಧಿ ನೇಮಕ ನಿರ್ಣಯ, ಅರ್ಜಿ ಸಲ್ಲಿಸಿದ ಸಹಕಾರಿ ಸಂಘದ ಮೇಲೆ ಯಾವುದೆ ವಿಚಾರಣೆ, ಲಿಕ್ವಿಡೇಷನ್ ನಡವಳಿ ನಡೆದಿರುವುದಿಲ್ಲ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಢೀಕರಣ ಪತ್ರ, ವ್ಯಾಪಾರದ ಮಳಿಗೆಯ ಖಾತೆ ಅಥವಾ ಬಾಡಿಗೆ ಕರಾರು ಪತ್ರ, ಹಣಕಾಸು ಹೊಂದಿರುವ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ ಪ್ರತಿನಿಧಿಯ ಇತ್ತೀಚಿನ 3 ಭಾವಚಿತ್ರ, ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಪ್ರಕರಣಗಳು ಹೊಂದಿಲ್ಲದಿರುವ ಬಗ್ಗೆ ಪೆÇಲೀಸ್ ಇಲಾಖೆಯಿಂದ ಪೊಲೀಸ್  ವೆರಿಪಿಕೇಷನ್ ರಿಪೆÇೀರ್ಟ್‍ನ್ನು ಪಡೆದು ಕಡ್ಡಾಯವಾಗಿ ಸಲ್ಲಿಸಬೇಕು. ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Leave A Reply

Your email address will not be published.