Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಮೈಸೂರು ರಂಗಾಯಣದ ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ (ಡಿಪ್ಲೋಮಾ) ಅರ್ಜಿ ಆಹ್ವಾನ

0

 

ಮೈಸೂರು: ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 14 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ಚವಿದ್ಯಾಲಯದ ಮಾನ್ಯತೆ ಪಡೆದಿದೆ. ಪ್ರತಿ ವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮೊ ಕೋರ್ಸ್‍ನ್ನು ನಡೆಸುವ  ಈ ಸಂಸ್ಥೆಯು ಪ್ರಸ್ತುತ 2023-24ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

2023-24ನೇ ಸಾಲಿನ ಈ ರಂಗ ತರಬೇತಿ ಕೋರ್ಸ್‍ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಮಾಹೆಯಾನ ರೂ.5,000/-ಗಳ ವಿದ್ಯಾರ್ಥಿ ವೇತನ ಪಾವತಿಸಲಾಗುವುದು.

ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ದಿನಾಂಕ:15-05-2023ರಿಂದ ರಂಗಾಯಣದ ವೆಬ್‍ಸೈಟ್ http://rangayanamysore.karnataka.gov.in ನಲ್ಲಿ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಕೆಲಸದ ದಿನಗಳ ಕಚೇರಿ ಅವಧಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಶುಲ್ಕ ಸಾಮಾನ್ಯ ವರ್ಗ ರೂ.230/-, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.180/-ಗಳು (ರಂಗಕೈಪಿಡಿ ಶುಲ್ಕ ರೂ.30/- ಒಳಗೊಂಡಂತೆ) ಡಿ.ಡಿ.ಯನ್ನು  ಉಪ ನಿರ್ದೇಶಕರು, ರಂಗಾಯಣ, ಮೈಸೂರು (Deputy Director, Rangayana, Mysore)  ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ದಿನಾಂಕ:05-06-2023 ಸಂಜೆ 5.30ರೊಳಗೆ ತಲುಪುವಂತೆ ಅಂಚೆಯ ಮೂಲಕ ಕಳುಹಿಸಬಹುದು.

ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುವುದು. ರಂಗಾಯಣದ ಆವರಣದಲ್ಲಿ ನಡೆಯುವ ಈ ಸಂದರ್ಶನಕ್ಕೆ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗಬೇಕು. ಗರಿಷ್ಠ 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಸಂದರ್ಶನದ ದಿನ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ಮಾತ್ರ ರಂಗಾಯಣದಿಂದ ಮಾಡಲಾಗುವುದು. ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ.

ಹೆಚ್ಚಿನ ವಿವರಕ್ಕಾಗಿ ದೂರವಾಣಿ ಸಂಖ್ಯೆ 0821-2512639, 9448938661, 9148827720, 8867514311 ಅನ್ನು ಸಂಪರ್ಕಿಸಬಹುದು ಎಂದು ಮೈಸೂರು ರಂಗಾಯಣ ಉಪ ನಿರ್ದೇಶಕರು ತಿಳಿಸಿದ್ದಾರೆ.

Leave A Reply

Your email address will not be published.