ಚಿತ್ರದುರ್ಗ: ಮಹಾತ್ಮಗಾಂಧಿ ನರೇಗಾ ಯೋಜನೆಯ ಜಲಸಂಜೀವಿನಿ ಕಾರ್ಯಕ್ರಮದ ಯಶಸ್ವಿ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಮಾಡಲು ಜಿಲ್ಲಾ ಸಂಯೋಜನಕರ ನೇಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಜಲಾನಯನ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕುರಿತು ಅನುಭವ ಹೊಂದಿರುವ ಬಿ.ಎಸ್ಸಿ. (ಅಗ್ರಿ) ಅಥವಾ ಬಿ.ಟೆಕ್. (ಅಗ್ರಿಕಲ್ಚರ್ ಇಂಜಿನಿಯರಿAಗ್) ಪದವೀದರರು ಅರ್ಜಿ ಸಲ್ಲಿಸಬಹುದು. ವಯೋಮಿತಿ ಗರಿಷ್ಠ 65 ವರ್ಷಗಳಾಗಿದೆ. ಸಮಾಲೋಚಕರಾಗಿ ಆಯ್ಕೆಯಾದವರಿಗೆ ಪ್ರತಿ ಮಾಹೆ ರೂ.50,000 ಹಾಗೂ ರೂ.5000 ಪ್ರಯಾಣ ಭತ್ಯ ನೀಡಲಾಗುವುದು. ಜೂನ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಮಾರ್ಗಸೂಚಿಗಳ ಅನ್ವಯ ಜಿಲ್ಲಾ ಮಟ್ಟದ ಸಮಿತಿ 3 ವ್ಯಕ್ತಿಗಳನ್ನು ಆಯ್ಕೆ ಮಾಡಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೆ ನಾಮನಿರ್ದೇಶನ ಮಾಡುವುದು. ರಾಜ್ಯ ಮಟ್ಟದ ಸಮಿತಿ ಸಂದರ್ಶನದ ಮೂಲಕ ಓರ್ವ ವ್ಯಕ್ತಿಯನ್ನು ಅಂತಿಮವಾಗಿ ಆಯ್ಕೆ ಮಾಡುವುದು. ಅರ್ಜಿ ಹಾಗೂ ಇನ್ನಿತರ ಮಾಹಿತಿಗಾಗಿ ಜಿಲ್ಲಾ ಪಂಚಾಯತಿ ಕಾರ್ಯಾಲಯದ ನರೇಗಾ ಶಾಖೆ ಅಥವಾ ದೂರವಾಣಿ ಸಂಖ್ಯೆ 08194-223058ಗೆ ಸಂಪರ್ಕಿಸಬಹುದು ಎಂದು ಜಿ.ಪ.ಸಿಇಓ ಎಂ.ಎಸ್.ದಿವಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.