ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ (ಹಿರಿಯ ಪ್ರಾಥಮಿಕ-ಸೆಕೆಂಡರಿ ಹಂತ) ಹುದ್ದೆಗಳನ್ನು ತಾತ್ಕಾಲಿಕವಾಗಿ ನೇರಗುತ್ತಿಗೆ ಆಧಾರದ ಮೇಲೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜುಲೈ 21 ಅರ್ಜಿ ಸಲ್ಲಿಸಲು ಕೊನೆಯ ದಿನ.
2023-24ನೇ ಸಾಲಿಗೆ ಸಮನ್ವಯ ಶಿಕ್ಷಣ ಮಧ್ಯವರ್ತನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಖಾಲಿ ಇರುವ ಸಮನ್ವಯ ಶಿಕ್ಷಣ ವಿಶೇಷ ಸಂಪನ್ಮೂಲ ಹಿರಿಯ ಪ್ರಾಥಮಿಕ-ಸೆಕೆಂಡರಿ ಹಂತದ ಶಿಕ್ಷಕರುಗಳ ಹುದ್ದೆಗಳನ್ನು ತಾತ್ಕಾಲಿಕವಾಗಿ ಆರ್.ಸಿ.ಐ ನಿಯಮದಂತೆ (ವಿಶೇಷ ಅಗ್ಯತೆಯುಳ್ಳ ಮಕ್ಕಳ ಬಗ್ಗೆ) ಬಿ.ಐ.ಇ.ಆರ್.ಟಿ ಹುದ್ದೆಗೆ B.Ed in special education from a RCI approved institution with possess a valid RCI CRR nuber OR B.Ed with arecognised Qualification (Certificate/Diploma) from RCI approved institution equivalent to B.ed in special education and possess a valid RCI CRR number. 6 Month Training of teaching in cross disability area in inciusive education ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ಈ ಮೇಲ್ಕಂಡ ವಿದ್ಯಾರ್ಹತೆಯನ್ನ ಪಡೆದ ಎಲ್ಲಾ ಅಂಕಪಟ್ಟಿಗಳು, ಆರ್.ಸಿ.ಐ ಶಾಶ್ವತ ಪ್ರಮಾಣ ಪತ್ರದೊಂದಿಗೆ ಸ್ವವಿವರವುಳ್ಳ ಮಾಹಿತಿಯನ್ನು ಜುಲೈ 17 ರಿಂದ ಜುಲೈ 21 ರವರೆಗೆ ಸಂಜೆ 4.30 ಗಂಟೆಯೊಳಗೆ ಮುದ್ದಾಂ ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಚಿತ್ರದುರ್ಗ ಈ ವಿಳಾಸಕ್ಕೆ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಾಜೀವ್, ಡಿಐಇಆರ್‍ಟಿ, ಚಿತ್ರದುರ್ಗ ಮೊಬೈಲ್ ಸಂಖ್ಯೆ 8073269824 ಇವರನ್ನು ಸಂಪರ್ಕಿಸಬಹುದು.
06 ಬ್ಲಾಕ್‍ಗಳಲ್ಲಿ ಖಾಲಿ ಇರುವ ಹಿರಿಯ ಪ್ರಾಥಮಿಕ-ಸೆಕೆಂಡರಿ ಹಮತದ ಬಿ.ಐ.ಇ.ಆರ್.ಟಿ. ಹುದ್ದೆಗಳ ಮಾಹಿತಿ: ಚಿತ್ರದುರ್ಗ-01, ಚಳ್ಳಕೆರೆ-02, ಹಿರಿಯೂರು-02, ಹೊಳಲ್ಕೆರೆ-02, ಹೊಸದುರ್ಗ-02, ಮೊಳಕಾಲ್ಮುರು-02 ಖಾಲಿ ಹುದ್ದೆಗಳು ಸೇರಿದಂತೆ ಒಟ್ಟು 11 ಹುದ್ದೆಗಳಿಗೆ ಖಾಲಿ ಇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.