ಚಿತ್ರದುರ್ಗ: ರಾಜ್ಯ ವಿಧಾನಸಭೆಗೆ ಬುಧವಾರ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು ಶೇ.80.37 ರಷ್ಟು ಮತದಾನವಾಗಿದೆ.
ಸಂಜೆ 5ಕ್ಕೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯ ಸರಾಸರಿ ಮತದಾನ ಶೇ.70.74 ಮತದಾನವಾಯಿತು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.47 ರಷ್ಟು ಮತದಾನ ನಡೆಯಿತು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಶೇ.76, ಚಳ್ಳಕೆರೆ ಶೇ.69.32, ಹಿರಿಯೂರು ಶೇ.62.05, ಹೊಸದುರ್ಗ ಶೇ.71.87, ಹೊಳಲ್ಕೆರೆ ಶೇ.74.97ರಷ್ಟು ಮತದಾನವಾಯಿತು.
ಅಂತಿಮವಾಗಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲೆಯ ಸರಾಸರಿ ಮತದಾನ ಶೇ.80.37 ಮತದಾನವಾಯಿತು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.76.42 ರಷ್ಟು ಮತದಾನ ನಡೆಯಿತು. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಶೇ.82.73, ಚಳ್ಳಕೆರೆ ಶೇ.79.8, ಹಿರಿಯೂರು ಶೇ.78.25, ಹೊಸದುರ್ಗ ಶೇ.84, ಹೊಳಲ್ಕೆರೆ ಶೇ.82 ರಷ್ಟು ಮತದಾನವಾಯಿತು.
ಇದೇ ಮೇ.13ರಂದು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ.