Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ವಿಧಾನಸಭಾ ಚುನಾವಣೆ : ಜಿಲ್ಲೆಯಲ್ಲಿ ಎಷ್ಟು ಜನ ಮತದಾರರು ಇದ್ದಾರೆ.?

0

 

ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಸಿದ್ದವಾಗಿದೆ. ಜಿಲ್ಲೆಯಲ್ಲಿ ಒಟ್ಟು 14,03,585 ಮತದಾರರು ಇದ್ದು, ಇದರಲ್ಲಿ 7,00,811 ಪುರುಷ, 7,02,702 ಮಹಿಳಾ ಹಾಗೂ 72 ಇತರೆ ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ತಿಳಿಸಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 1,22,927 ಪುರುಷ, 1,20,788 ಮಹಿಳೆ ಹಾಗೂ 12 ಇತರೆ ಸೇರಿ ಒಟ್ಟು 2,43,727 ಮತದಾರರು ಇದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 1,09,992 ಪುರುಷ, 1,10,917 ಮಹಿಳೆ ಹಾಗೂ 3 ಇತರೆ ಸೇರಿ ಒಟ್ಟು 2,20,912 ಮತದಾರರು ಇದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 1,29,626 ಪುರುಷ, 1,32,831 ಮಹಿಳೆ ಹಾಗೂ 34 ಇತರೆ ಸೇರಿ ಒಟ್ಟು 2,62,419 ಮತದಾರರು ಇದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 1,20,884 ಪುರುಷ, 1,22,642 ಮಹಿಳೆ ಹಾಗೂ 15 ಇತರೆ ಸೇರಿ ಒಟ್ಟು 2,43,541 ಮತದಾರರು ಇದ್ದಾರೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 99,418 ಪುರುಷ, 98236 ಮಹಿಳೆ ಒಟ್ಟು 1,97,654 ಮತದಾರರು ಇದ್ದಾರೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 1,17,964ಪುರುಷ, 1,17,288 ಮಹಿಳೆ ಹಾಗೂ 8 ಇತರೆ ಸೇರಿ ಒಟ್ಟು 2,35,260 ಮತದಾರರು ಇದ್ದಾರೆ.

39,439 ಯುವ ಮತದಾರರು:

ಜಿಲ್ಲೆಯಲ್ಲಿ 21,277 ಪುರುಷ, 18,161 ಮಹಿಳಾ ಹಾಗೂ ಓರ್ವ ಇತರೆ ಸೇರಿ ಒಟ್ಟು 39,439 ಯುವ ಮತದಾರರು ಇದ್ದಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 7,367, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 5778, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 7302, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 6,985, ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 5,699, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 6,308 ಯುವ ಮತದಾರರು ಮತದಾನಕ್ಕೆ ಸಿದ್ಧರಾಗಿದ್ದಾರೆ.

ಜಿಲ್ಲೆಯಲ್ಲಿ 80 ವರ್ಷ ದಾಟಿದ 30,446 ಮತದಾರರು ಪೈಕಿ 1,133 ಮತದಾರರು, ಹಾಗೂ 21,452 ವಿಕಲಚೇತನ ಮತದಾರರ ಪೈಕಿ 406 ಮತದಾರರು ಮನೆಯಿಂದ ಮತದಾನ ಮಾಡಲು ಅವಕಾಶ ಕೋರಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿದ್ದಾರೆ. ಇದನ್ನು ಪುರಸ್ಕರಿಸಿ ಮನೆಯಿಂದ ಮತದಾನ ಮಾಡಲು ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ 381 ಸೇವಾ ಮತದಾರರು, 266 ಅಗತ್ಯ ಸೇವೆಗಳಲ್ಲಿ ಇರುವ ಮತದಾರರು ಇದ್ದಾರೆ. 10,588 ಮತದಾರರಿಗೆ ಫಾರಂ 12 ವಿತರಿಸಲಾಗಿದೆ ಒಟ್ಟು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.