ಬೆಂಗಳೂರು: ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತಾಪಿ ಸಮುದಾಯಕ್ಕೆ ಆಘಾತ ಎದುರಾಗಿದ್ದು, ರಾಜ್ಯಕ್ಕೆ ಇನ್ನೂ ಒಂದು ವಾರ ಮುಂಗಾರು ಪ್ರವೇಶ ವಿಳಂಬವಾಗಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೇರಳಕ್ಕೆ ಮುಂಗಾರು ಪ್ರವೇಶವಾಗುವುದು ತಡವಾಗಿರುವುದೇ ರಾಜ್ಯ ಪ್ರವೇಶಕ್ಕೂ ತಡವಾಗಿದೆ. ಮುಂದಿನ 3-4 ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಬಳಿಕ ರಾಜ್ಯಕ್ಕೆ ಪ್ರವೇಶವಾಗುತ್ತದೆ ಎಂದಿದೆ. ಇನ್ನು, ಕೆಲದಿನಗಳ ಹಿಂದೆ ಸುರಿದ ಮುಂಗಾರು ಪೂರ್ವ ಮಳೆ ಹಲವೆಡೆ ಅವಾಂತರಕ್ಕೆ ಕಾರಣವಾಗಿತ್ತು.