ಧಾರವಾಡ: 2012ರಲ್ಲಿ BS ಯಡಿಯೂರಪ್ಪ KJP ಕಟ್ಟಿದಾಗ, BJPಯಲ್ಲಿದ್ದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸೇರಲು ಮಾತುಕತೆ ನಡೆಸಿದ್ದರು ಎಂದು ಜಗದೀಶ್ ಶೆಟ್ಟರ್ ಸ್ಫೋಟಕ ಬಾಂಬ್ ಸಿಡಿಸಿದ್ದಾರೆ.
ಧಾರಾವಾಡದಲ್ಲಿ ಮಾತನಾಡಿದ ಅವರು, BSY ಶಿಷ್ಯನಾಗಿದ್ದರೂ ಅವರು ಕೆಜೆಪಿ ಕಟ್ಟಿದಾಗ ಅವರ ಜೊತೆ ಹೋಗಲಿಲ್ಲ. ಆಗ ಅವರನ್ನು ಮನವೊಲಿಸಿ ಬಿಜೆಪಿಯಲ್ಲಿ ಇರಿಸಿಕೊಳ್ಳಲಾಗಿತ್ತು. ಈಗ ಸಿಎಂ ಆಗಿರುವ ಅವರು, ಹಳೆಯದನ್ನೆಲ್ಲಾ ಮರೆತು ನನ್ನ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದ್ದಾರೆ.