ಬೆಂಗಳೂರು: ನಟ ಸುದೀಪ್, ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಕಿಚ್ಚನ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಅವರ ಅಭಿಮಾನಿಗಳು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಅವರು ಕೇವಲ ಒಂದು ಪಕ್ಷಕ್ಕೆ ಮಾತ್ರ ಸೀಮಿತ ಆಗಬಾರದು. ಕಿಚ್ಚ ರಾಜಕೀಯಕ್ಕೆ ಬರುವುದು ಒಳ್ಳೆಯದಲ್ಲ.
ಪುನೀತ್ ರಾಜ್ ಕುಮಾರ್ ಕಟ್ಟಿದಂತೆ ಅವರೂ ಪಕ್ಷಾತೀತವಾಗಿ ಜನಸೇನೆಯನ್ನು ಕಟ್ಟಬೇಕು. ಕೊನೆಯವರೆಗೂ ಅವರು ಕನ್ನಡದ ಆಸ್ತಿಯಾಗಿ ಉಳಿಯಬೇಕು ಎಂಬುದೇ ನಮ್ಮ ಆಶಯ ಎಂದಿದ್ದಾರೆ.