Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಭ್ರಷ್ಟಾಚಾರ ಎಚ್.ಆಂಜನೇಯ ಆರೋಪ

0

 

ಹೊಳಲ್ಕೆರೆ: ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಭ್ರಷ್ಟಾಚಾರ, ನಿರುದ್ಯೋಗ, ಮತ್ತು ಬೆಲೆ ಏರಿಕೆಡಬಲ್ ಮಾಡಿದ್ದೆದೊಡ್ಡ ಸಾಧನೆ ಎಂದು ಮಾಜಿ ಸಚಿವ, ಕಾಂಗ್ರೆಸ್‍ ಅಭ್ಯರ್ಥಿಎಚ್.ಆಂಜನೇಯ ದೂರಿದರು.

ಭರಮಸಾಗರ ಹೋಬಳಿ ಬ್ಯಾಲಹಾಳ್ ಗ್ರಾಮದಲ್ಲಿಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮತಪ್ರಚಾರದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ನೀಡಿದಉದ್ಯೋಗ ಭದ್ರತೆಯ ಭರವಸೆ ಸಂಪೂರ್ಣವಾಗಿ ವಿಫಲವಾಗಿದ್ದು, ನಿರುದ್ಯೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚಳವಾಗತೊಡಗಿದೆ. ಹೀಗಾಗಿ ಯುವ ಸಮೂಹ ಎಚ್ಚೆತ್ತುಕೊಂಡು ಭ್ರಷ್ಟ ಬಿಜೆಪಿಯನ್ನುಕಿತ್ತೊಗೆಯಲು ಪಣತೊಡಬೇಕಿದೆಎಂದರು.

ಕಾಂಗ್ರೆಸ್ ಪಕ್ಷ ಸದಾ ಬಡವರು ಮತ್ತು ನಿರುದ್ಯೋಗಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿತ್ತು.ಆದರೆ, ಈಗಿನ ಬಿಜೆಪಿ ಸರ್ಕಾರಇವರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ, ಬರೀ ಬಂಡವಾಳಶಾಯಿಗಳಿಗೆ ಮಣೆಹಾಕಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೆಡಬಲ್ ಇಂಜಿನ್ ಸರ್ಕಾರದ ಸಾಧನೆಯಾಗಿದೆ.ರಾಜ್ಯದಲ್ಲಿ ಮತ್ತೆಉದ್ಯೋಗ ಸೃಷ್ಟಿ, ಬಡತನ ನಿವಾರಣೆಆಗಬೇಕಾದರೆಕಾಂಗ್ರೆಸ್ ನಿಂದ ಮಾತ್ರ ಸಾಧ್ಯಎಂದರು.

ಸಿದ್ಧರಾಮಯ್ಯ ಅಧಿಕಾರದಅವಧಿಯಲ್ಲಿ ನೀಡಿದ್ದಎಲ್ಲ ಭರವಸೆಗಳನ್ನು ಈಡೇರಿಸಿ ಜನಪರ ಆಡಳಿತ ನೀಡಲಾಗಿತ್ತು.ಅದರಂತೆಯೇ ಮುಂದಿನ ದಿನಗಳಲ್ಲಿ ರಾಜ್ಯವನ್ನು ಸುಭಿಕ್ಷವಾಗಿಡಲುಅನ್ನಭಾಗ್ಯಯೋಜನೆಯಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ 10 ಕೆಜಿಉಚಿತ ಪಡಿತರ, 200 ಯೂನಿಟ್‍ಉಚಿತ ವಿದ್ಯುತ್, ನಿರುದ್ಯೋಗಿಯುವಕರಿಗೆ ರು.3000 ಭತ್ಯೆ, ಮನೆ ಒಡತಿಗೆ ರು.2000, ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿಉಚಿತ ಪ್ರಯಾಣಿಸುವುದು ಸೇರಿದಂತೆ ಹಲವು ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.

ನನ್ನಅಧಿಕಾರದಅವಧಿಯಲ್ಲಿ ಪ್ರತಿ ಮಕ್ಕಳು ಸುಶಿಕ್ಷಿತರಾಗಬೇಕು ಎನ್ನುವ ಮಹಾತ್ವಾಕಾಂಕ್ಷೆಯಿಂದ ಶಿಕ್ಷಣ ಕ್ಷೇತ್ರಕ್ಕೆ ಸಾವಿರಾರುಕೋಟಿಅನುದಾನ ನೀಡಿ ವಸತಿ ಕಟ್ಟಡಗಳು, ಹೈಟೆಕ್ ಸರ್ಕಾರಿ ಶಾಲೆಗಳನ್ನು ನಿರ್ಮಿಸಲಾಯಿತು.ಆದರೆ, ಈಗಿನ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೇ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ.ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪ್ರಚಾರ ಸಮಿತಿಅಧ್ಯಕ್ಷಆರ್.ಕೃಷ್ಣಮೂರ್ತಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರಅಭಿವೃದ್ಧಿಆಧಾರದ ಮೇಲೆ ಮತಯಾಚಿಸದೇ ಬರೀ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತಕೇಳುತ್ತಿದೆ.ಇದರಿಂದ ಬಿಜೆಪಿಗೆಯಾವುದೇಉಪಯೋಗವಾಗುವುದಿಲ್ಲ ಎಂದರು.

ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಎಂ.ಪ್ರಕಾಶ್,  ಬ್ಲಾಕ್‍ಕಾಂಗ್ರೆಸ್ ಮಾಜಿಅಧ್ಯಕ್ಷ ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಗ್ರಾಪಂಅಧ್ಯಕ್ಷೆ ಲಕ್ಷಿದೇವಿ ಬೈಯಪ್ಪ, ಉಪಾಧ್ಯಕ್ಷೆದ್ಯಾಮಮ್ಮದೇವೆಂದ್ರಪ್ಪ, ಸದಸ್ಯರಾದ ಸುಶೀಲಮ್ಮ, ಕೃಷ್ಣಮೂರ್ತಿ,ಮೋಹನ್, ಜಯಣ್ಣ, ಮಂಜಪ್ಪ, ರೈತ ಮುಖಂಡ ಮಂಜಣ್ಣ, ಮುಖಂಡರಾದಓಬಜ್ಜ, ಬ್ಯಾಲಹಾಳ್ ಜಯಪ್ಪ, ತಿಪ್ಪಜ್ಜರರುದ್ರಪ್ಪ, ಸಿದ್ದರ ಜಯಣ್ಣ ಉಪಸ್ಥಿತರಿದ್ದರು.

Leave A Reply

Your email address will not be published.