ಬೆಂಗಳೂರು: ಬಿಜೆಪಿ 31 ಸಾವಿರ ಬೂತ್ಗಳಲ್ಲಿ ಮುನ್ನಡೆ ಸಾಧಿಸುವುದು ನಿಶ್ಚಿತ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು, ಟ್ವೀಟ್ ಮಾಡಿದ್ದಾರೆ.
ಪ್ರಖ್ಯಾತ ಸಮೀಕ್ಷಾ ಸಂಸ್ಥೆಗಳು 2014 ರಲ್ಲಿ 282 ಅಥವಾ 2019 ರಲ್ಲಿ 303 ಸೀಟುಗಳು, 2022 ರಲ್ಲಿ 156 ಬರುತ್ತವೆ ಎಂದು ಭವಿಷ್ಯ ನುಡಿದಿರಲಿಲ್ಲ. 2018 ರಲ್ಲಿ 104 ಬರುತ್ತವೆ ಎಂದೂ ಹೇಳಿರಲಿಲ್ಲ.
2018 ರಲ್ಲಿ 24 ಸಾವಿರ ಬೂತ್ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಈ ಬಾರಿ 31 ಸಾವಿರ ಬೂತ್ಗಳಲ್ಲಿ ನಾವು ಮುನ್ನಡೆ ಸಾಧಿಸಲಿದ್ದೇವೆ. ಸಂಖ್ಯೆ ಎಷ್ಟು ಎಂದು ನೀವೇ ಊಹಿಸಿ’ ಎಂದು ಹೇಳಿದ್ದಾರೆ.