ಮೈಸೂರು: ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ಕರ್ನಾಟಕದಲ್ಲಿ ಬಿಜೆಪಿ ಕಸದ ತೊಟ್ಟಿಯಾಗಿದೆ. ಮೋದಿಯವರು ಕರ್ನಾಟಕಕ್ಕೆ ಬಂದಿದ್ದು, ಮೈಸೂರಿಗೆ ಬಂದು ಕಸದ ತೊಟ್ಟಿಯಾಗಿರುವ ಕರ್ನಾಟಕ ಬಿಜೆಪಿಯನ್ನು ಸ್ವಚ್ಛಗೊಳಿಸಲಿ.
ಮೋದಿಯವರು ರಾಜ್ಯಕ್ಕೆ ಏನು ಕೊಡುತ್ತಾರೆ ಎಂದು ಹೇಳಲಿ. ಅದರ ಜೊತೆಗೆ ಬಿಜೆಪಿಯನ್ನು ಸರಿ ಮಾಡಿ ಹೋಗಲಿ ಎಂದಿದ್ದಾರೆ.