ಹೈದರಬಾದ್: ಕ್ಯಾಂಟರ್ ಲಾರಿ ಡಿಕ್ಕಿಯಾದ ಪರಿಣಾಮದಿಂದ 3 ಆನೆಗಳು ಸಾವನ್ನಪ್ಪಿರುವ ಘಟನೆ ತಿರುಪತಿ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಆಂಧ್ರಪ್ರದೇಶದ ಪಲಮ್ನೇರು ಪ್ರದೇಶದಲ್ಲಿ ನಡೆದಿದೆ.
ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಮೂರು ಆನೆಗಳು ರಸ್ತೆ ದಾಟಲು ಪ್ರಯತ್ನಿಸಿದ್ದವು. ಈ ವೇಳೆಯೇ ರಭಸವಾಗಿ ಬಂದ ಲಾರಿ ಚಾಲಕನು ಮೂರು ಆನೆಗಳಿಗೆ ಭಾರೀ ಗುದ್ದಿದ್ದಾನೆ. ನಂತರ ಅಲ್ಲಿಂದ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಚಿತ್ತೂರು ಅರಣ್ಯಾಧಿಕಾರಿಗಳು ಭೇಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.