ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಿಸಲಾಗುವ 31 ಮಹಾಪುರುಷರ ರಾಜ್ಯಮಟ್ಟದ ಜಯಂತಿಗಳನ್ನು 2023-24 ನೇ ಸಾಲಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಚರಿಸಲಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯಾವ್ಯಾವ ಜಿಲ್ಲೆಯಲ್ಲಿ ಯಾವ ಜಯಂತಿಯನ್ನು ಆಚರಿಸಬೇಕು ಎಂಬುದರ ಕುರಿತು ದಿನಾಂಕ ಸಮೇತ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಜಿಲ್ಲಾ ಮಟ್ಟದ ಜಯಂತಿಗಳಿಗೆ 50000 ಮತ್ತು ತಾಲೂಕು ಮಟ್ಟದ ಆಚರಣೆಗೆ 20000 ಸಾವಿರ ನಿಗದಿ ಮಾಡಿ, ಆದೇಶವನ್ನು ಹೊರಡಿಸಿದೆ.
ಈ ಜಯಂತಿಗಳನ್ನು ಆಚರಿಸಲಾಗುತ್ತದೆ. ಕೆಂಪೇಗೌಡರ ಜಯಂತಿ(ಜೂ.27)ಯನ್ನು ಹಾಸನದಲ್ಲಿ, ಕನಕ ಜಯಂತಿ(ನ.30)ಯನ್ನು ಗದಗದಲ್ಲಿ, ಸಂತ ಸೇವಾಲಾಲ್ ಜಯಂತಿ(ಫೆ.15)ಯನ್ನು ಯಾದಗಿರಿಯಲ್ಲಿ ಹಾಗೂ ಶಿವಾಜಿ ಜಯಂತಿ(ಫೆ.19)ಯನ್ನು ಬಾಗಲಕೋಟೆಯಲ್ಲಿ ಆಚರಿಸಲಾಗುತ್ತದೆ.