ಬೆಂಗಳೂರು: ರಾಜ್ಯದ 33ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇದೇ ಶನಿವಾರ (ಮೇ 20) ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಬ್ಬರ ನಡುವೆ ಸಂಧಾನ ಸೂತ್ರ’ವನ್ನು ಹೆಣೆದ ಕಾಂಗ್ರೆಸ್ ವರಿಷ್ಠರು ಇಬ್ಬರನ್ನೂ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. 2013–2018ರ ಅವಧಿಯಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರು ಇದೇ 20ರಿಂದ ಮುಖ್ಯ ಮಂತ್ರಿ ಆಗಿ ತಮ್ಮ ಎರಡನೇ ಪರ್ವ ಆರಂಭಿಸಲಿದ್ದಾರೆ.