ಮೈಸೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ದೂರು ನೀಡಿದೆ. ಲಿಂಗಾಯತರನ್ನು ಬಿಜೆಪಿ ಪಕ್ಷ ಅವಮಾನಿಸಿದೆ ಎಂಬ ಹೇಳಿಕೆ ಆರೋಪಿಸಿ ಮೈಸೂರು ಗ್ರಾಮಾಂತರ ಕಾನೂನು ಘಟಕದಿಂದ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ.
ಕೆ.ಆರ್. ನಗರದಲ್ಲಿ ಪ್ರಚಾರದ ವೇಳೆ ಪ್ರಿಯಾಂಕಾ ಅವರು ಲಿಂಗಾಯತರಿಗೆ ಬಿಜೆಪಿ ಅವಮಾನಿಸಿದೆ ಎಂದು ಜಾತಿ, ಧರ್ಮದ ವಿಚಾರ ಬಳಸಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ, ಕ್ರಮ ಕೈಗೊಳ್ಳುವಂತೆ ಬಿಜೆಪಿ ದೂರಿನಲ್ಲಿ ಮನವಿ ಮಾಡಿದೆ.