ಬೆಂಗಳೂರು : ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಇದುವರೆಗೂ 39 ಶಿಕ್ಷಕರು ಅಮಾನತುಗೊಂಡಿದ್ದಾರೆ.
ಮಾರ್ಚ್ 31 ರಿಂದ ಆರಂಭವಾಗಿರುವ ಎಸ್ಎಸ್ ಎಲ್ ಸಿ ಪರೀಕ್ಷೆಯು ಏಪ್ರಿಲ್ 15 ರವರೆಗೆ ನಡೆಯಲಿದೆ. ಕಲಬುರಗಿಯಲ್ಲಿ 16, ಬೀದರ್ ನಲ್ಲಿ 16 ಹಾಗೂ ಬೆಳಗಾವಿಯಲ್ಲಿ 7 ಮಂದಿ ಶಿಕ್ಷಕರು ಸೇರಿ ಒಟ್ಟು 39 ಮಂದಿ ಶಿಕ್ಷಕರು ನಕಲಗಿರ ಸಹಕರಿಸಿದ ಆರೋಪದ ಮೇಲೆ ಅಮನಾತಿಗೆ ಒಳಗಾಗಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಪರೀಕ್ಷಾ ಕೇಂದ್ರದಲ್ಲಿ ಏಪ್ರಿಲ್ 3 ರಂದು ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ 7 ಶಿಕ್ಷಕರನ್ನು ಗುರುವಾರ ಸೇವೆಯಿಂದ ಅಮಾನತು ಮಾಡಿ ಡಿಡಿಪಿಐ ಬಸವರಾಜ ನಾಲತವಾಡ ಆದೇಶ ಹೊರಡಿಸಿದ್ದಾರೆ.