ಚಿತ್ರದುರ್ಗ: ಕರ್ನಾಟಕ ರಾಜ್ಯದಲ್ಲಿ ಭ್ರಷ್ಠಾಚಾರದ ಸರ್ಕಾರ ಇದೆ, ಇದು ಶೇ. ೪೦ ರಷ್ಟು ಲಂಚವನ್ನು ಸ್ವೀಕಾರ ಮಾಡುವುದರ ಮೂಲಕ ಕೆಲಸವನ್ನು ಮಾಡುತ್ತಿದೆ, ಇದನ್ನು ಈ ಚುನಾವಣೆಯಲ್ಲಿ ಕಿತ್ತು ಹಾಕಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನತೆ ಸಿದ್ದರಾಗಿದ್ದಾರೆ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರರಾದ ಡಾ. ಅಂಶುಲ್ ಅವಿಜಿಟ್ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯುವ ಜನತೆಗೆ ಉದ್ಯೋಗವನ್ನು ನೀಡುವಲ್ಲಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ ವಿಫಲವಾಗಿದೆ. ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ, ಕೈಗಾರಿಕೆಗಳು ಕಡಿಮೆಯಾಗಿ ಉದ್ಯೋಗಗಳು ಇಲ್ಲವಾಗಿದೆ ಸರ್ಕಾರದ ಅಧೀನದಲ್ಲಿದದ ಕಂಪನಿಗಳನ್ನು ಸರ್ಕಾರ ಖಾಸಗಿಕರಣ ಮಾಡುತ್ತಿದೆ. ಇದರಿಂದ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಈ ಸರ್ಕಾರದಲ್ಲಿ ಭಷ್ಠಾಚಾರ ಹೆಚ್ಚಾಗಿದೆ, ಇದರ ಬಗ್ಗೆ ಯಾರೂ ಸಹಾ ಮಾತನಾಡುತ್ತಿಲ್ಲ ಎಲ್ಲರು ಸುಮ್ಮನೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರಗಳು ಶೇ. ೧೦ರಷ್ಟಿರುವ ಶ್ರೀಮಂತರ ಪರವಾದ ಕಾನೂನುಗಳನ್ನು ಮಾಡುವುದರ ಮೂಲಕ ಅವರಿಗೆ ಸಹಾಯವನ್ನು ಮಾಡಲಾಗುತ್ತಿದೆ. ಆದರೆ ಶೇ. ೯೦ ರಷ್ಟು ಇರುವ ಬಡವರ ಪರವಾದ ಕಾನೂನುಗಳನ್ನು ಮಾಡುತ್ತಿಲ್ಲ, ಪರಿಶಿಷ್ಟ ಜಾತಿ ಮತು ಪಂಗಡದವರಿಗೆ ಇಟ್ಟಿದ್ದ ಹಣವನ್ನು ಸರ್ಕಾರ ಬೇರೆಯದ್ದಕ್ಕೆ ಬಳಕೆ ಮಾಡಿ ಅವರಿಗೆ ದ್ರೋಹವನ್ನು ಮಾಡಿದೆ. ಇದ್ದಲ್ಲದೆ ಬಡ ಮಕ್ಕಳ ಸ್ಕಾಲರ್‌ಶಿಪ್‌ನ್ನು ನಿಲ್ಲಿಸುವುದರ ಮೂಲಕ ಅವರ ವಿದ್ಯಾಭ್ಯಾಸಕ್ಕೂ ಸಹಾ ವಿಘ್ನವನ್ನು ಉಂಟು ಮಾಡಿದೆ ಎಂದ ಅವರು, ಇದರೊಂದಿಗೆ ಇವರಿಗಾಗಿ ಇಟ್ಟಿರುವÀ ಆಯವ್ಯಯದಲ್ಲಿಯೂ ಸಹಾ ಅನುದಾನವನ್ನು ಕಡಿಮೆ ಮಾಡಿದೆ ಎಂದು ಡಾ. ಅಂಶುಲ್ ಅವಿಜಿಟ್ ದೂರಿದರು.
ಕಾಂಗ್ರೆಸ್ ಪಕ್ಷ ತನ್ನ ಮತದಾರರಿಗೆ ನಾಲ್ಕು ಗ್ಯಾರೆಂಟಿಗಳನ್ನು ನೀಡಿದೆ ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ನೀಡುವುದರ ಮೂಲಕ ಅವರ ಮನೆಯನ್ನು ಕತ್ತಲಲ್ಲಿ ಇಡದೆ ಬೆಳಕು ಮಾಡುತ್ತಿದೆ, ಇದಲ್ಲದೆ ಮನೆಯ ಗೃಹಣಿಗೆ ಪ್ರತಿ ಮಾಹೆ ಮನೆಯ ಖರ್ಚಿಗಾಗಿ ೨೦೦೦ ರೂ.ಗಳನ್ನು ನೀಡುವುದರ ಮೂಲಕ ಮನೆಯನ್ನು ಸುಲಲಿತವಾಗಿ ನಡೆಸುವಂತೆ ಮಾಡುತ್ತಿದೆ, ನಿರುದ್ಯೋಗ ಹೆಚ್ಚಾಗಿದು ಕೆಲಸ ಸಿಗುತ್ತಿಲ್ಲ ಇದರಿಂದ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕವಾಗಿ ನಿರುದ್ಯೋಗಿ ಭತ್ಯೆಯನ್ನು ನೀಡುವುದರ ಮೂಲಕ ಅವರಿಗೆ ದೈರ್ಯವನ್ನು ತುಂಬುತ್ತಿದೆ, ಕುಟುಂಬದಲ್ಲಿನ ಪ್ರತಿ ಸದಸ್ಯರಿಗೆ ಪ್ರತಿ ಮಾಹೆ ೧೦ ಅಕ್ಕಿಯನ್ನು ಉಚಿತವಾಗಿ ನೀಡುವುದರ ಮೂಲಕ ಯಾರು ಸಹಾ ಹಸಿವಿನಿಂದ ಇರಬಾರದೆಂದು ನೀಡಲಾಗುತ್ತಿದೆ ಇದೆಲ್ಲವು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರ ಮೂಲಕ ನೀಡಲಾಗುತ್ತದೆ ಎಂದರು.
ಕೆ.ಪಿ.ಸಿ,ಸಿ. ವಕ್ತಾರರಾದ ಬಾಲಕೃಷ್ಣ ಯಾದವ್ ಮಾತನಾಡಿ ಏ. ೨೬ ರಂದು ಹಿರಿಯೂರಿನಲ್ಲಿ ಪ್ರಿಯಾಂಕಗಾಂಧಿಯವರು ಬೇಟಿ ನೀಡಲಿದ್ದಾರೆ. ಮಧ್ಯಾಹ್ನ ೧.೪೦ಕ್ಕೆ ಹಿರಿಯೂರಿಗೆ ಆಗಮಿಸುವ ಪ್ರಿಯಾಂಕರವರು ತದ ನಂತರ ೧೦೦ ಜನ ಕಾಡುಗೊಲ್ಲರೊಂದಿಗೆ ಅವರ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ತದ ನಂತರ ಹಿರಿಯೂರು ಗಾಂಧಿ ವೃತ್ತದಿಂದ ರಂಜಿತ ಹೋಟೇಲ್ ರವರಗೆ ರೋಡ್ ಷೋದಲ್ಲಿ ಭಾಗವಹಿಸಲಿದ್ದಾರೆ ಇದರಲ್ಲಿ ಜಿಲ್ಲೆಯ ಆರು ಜನ ಕಾಂಗ್ರೆಸ್ ಅಭ್ಯರ್ಥಿಗಳು ಸೇರಿದಂತೆ ಶಿರಾ ಮತ್ತು ಕಳ್ಳಂಬೆಳ ದ ಅಭ್ಯರ್ಥಿಗಳು ಭಾಗವಹಸಲಿದ್ದಾರೆ ಎಂದರು.
ಗೋಷ್ಟಿಯಲ್ಲಿ ಸಂಪತ್ ಕುಮಾರ್ ಎನ್.ಡಿ.ಕುಮಾರ್, ಪ್ರಭುದೇವ್, ಮಲ್ಲೇಶ್, ಮುದಾಸಿರ್, ನಟರಾಜ್, ಲಿಂಗರಾಜು ದೇವರಾಜು ಪ್ರಸನ್ನ ಸೇರಿದಂತೆ ಇತರರು ಭಾಗವಹಿಸಿದ್ದರು.