Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

Cyclone Mocha: ರಾಜ್ಯದ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರೆಯವ ಮುನ್ಸೂಚನೆ

0

ಕರ್ನಾಟಕ: ಈಗಾಗಲೇ ಮೋಚಾ ಚಂಡಮಾರುತದ ಪ್ರಭಾವದಿಂದ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬರೆದಿದ್ದಾನೆ. ಕೆಲವೆಡೆ ಬಿರುಗಾಳಿ ಸಹತ ಮಳೆ ಸುರಿದ ಹಿನ್ನೆಲೆ ಬೆಟ್ಟಗುಡ್ಡಗಳು ಕುಸಿದಿವೆ. ಇನ್ನು ಕೆಲವೆಡೆ ಕೃಷಿ ಭೂಮಿಗಳು ಜಲಾವೃತ ಆದ ಘಟನೆಗಳು ನಡೆದಿವೆ.

ಅದರಲ್ಲೂ ಕರಾವಳಿ ಭಾಗಗಳಲ್ಲಿ ಇಂದು ಮುಂಜಾನೆಯಿಂದಲೇ ಮಳೆ ಆರಂಭವಾಗಿದೆ. ಅಲ್ಲದೆ ಹವಾಮಾನ ಇಲಾಖೆ ಕರಾವಳಿ ಭಾಗದ ಮೀನುಗಾರರಿಗೆ ಕೆಲವು ಎಚ್ಚರಿಕೆ ಸಂದೇಶವನ್ನು ನೀಡಿದೆ.

ಕಾಂಗ್ರೆಸ್​ ಅಭ್ಯರ್ಥಿಯ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ

ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಮದ್ದೂರು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗಿದ್ದು, ಈಗಾಗಲೇ ಈ ಗುಡುಗು, ಮಿಂಚು ಸಹಿತ ಮಳೆಯಿಂದ ಹಲವರು ಪ್ರಾಣ ಕಳೆದುಕೊಂಡ ಘಟನೆಯೂ ಕೂಡ ಸಂಭವಿಸಿದೆ. ಆದ್ದರಿಂದ ಈ ಭಾಗದ ಮೀನುಗಾರರಿಗೆ ಮೂರು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಳಖೆ ಎಚ್ಚರಿಕೆ ಸಂದೇಶ ರವಾನಿಸಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮೊನ್ನೆ ಸಂಜೆ ಮಳೆ ಸುರಿದದ್ದು, ನಿನ್ನೆ ಮಾತ್ರ ಬಿಡುವು ಕೊಟ್ಟಿದೆ. ಆದರೆ ಇಂದು ಮೋಡ ಕವಿದ ವಾತವರಣ ಇದ್ದು, ನಗರದಲ್ಲಿ ಮಳೆ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮತ್ತೊಂಡೆ ಕರ್ನಾಟಕದ ಕರಾವಳಿ ಭಾಗದಲ್ಲಿ ಬೆಳ್ಳಂಬೆಳ್ಳಗ್ಗೆಯೇ ಮಳೆ ಶುರುವಾಗಿದೆ.

Leave A Reply

Your email address will not be published.