ಬೆಂಗಳೂರು: ಮಾನ್ಯ ನರೇಂದ್ರ ಮೋದಿಯವರೇ, ನೀವು ನೂರು ʻಮನ್ ಕಿ ಬಾತ್ʼ ಕಾರ್ಯಕ್ರಮವನ್ನು ಮುಗಿಸಿದ್ದಕ್ಕೆ ಅಭಿನಂದನೆಗಳು, ಈಗಲಾದರೂ ʻಜನ್ ಕಿ ಬಾತ್ʼ ಕೇಳುತ್ತೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 125 ಡಾಲರ್ ಇದ್ದಾಗ, ದೇಶದಲ್ಲಿ ಪೆಟ್ರೋಲ್ ಬೆಲೆ 57 ರೂ ಇತ್ತು. ಈಗ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 54.77 ಡಾಲರ್ ಇರುವಾಗ, ಪೆಟ್ರೋಲ್ ಬೆಲೆ 102 ರೂಪಾಯಿ ಆಗಿರುವುದು ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನೆ.!