ಬೆಂಗಳೂರು: 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕರಿಸಿದೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಮೇ.22ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಜೂನ್ 1, 2023ರಿಂದ ಕಾಲೇಜು ಆರಂಭವಾಗಲಿವೆ.
ಅಕ್ಟೋಬರ್ 14, 2023 ರಿಂದ ಅಕ್ಟೋಬರ್ 29, 2023ರ ವರೆಗೆ ಮಧ್ಯಂತರ ರಜೆ ಇರಲಿದೆ. ಮಾರ್ಚ್ 30,-2024 ಕೊನೆಯ ಕಾರ್ಯನಿರತ ದಿನವಾಗಿದ್ದು, ಮಾರ್ಚ್ 31,2024ರಿಂದ ಬೇಸಿಗೆ ರಜೆ ಪ್ರಾರಂಭಗೊಳ್ಳಲಿದೆ. ಇಲಾಖೆಯ ನಿರ್ದೇಶಕರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.