ದೆಹಲಿ: ಭಾರತೀಯ ರೈಲ್ವೆಯು ಟಿಕೆಟಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯ 5 ಪ್ರಿಂಟಿಂಗ್ ಪ್ರೆಸ್ ಘಟಕಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆಯಂತೆ.?
ಸದ್ಯಕ್ಕೆ ರೈಲ್ವೆ ಟಿಕೆಟ್ ಹಾಗೂ ರಸೀದಿಗಳನ್ನು ಬೇರೆ ಕಡೆಯಲ್ಲಿ ಮುದ್ರಿಸಲು ಕೂಡ ನಿರ್ಧರಿಸಿದೆ. ನಕಲಿ ಟಿಕೆಟ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ರೈಲ್ವೆ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಎಲ್ಲಾ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ರೈಲ್ವೆ ಮಂಡಳಿಯಿಂದ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.