ಚಿತ್ರದುರ್ಗ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಹಳ್ಳಿ ಟೋಲ್ ಬಳಿ ಏಪ್ರಿಲ್ 11ರಂದು ಮಂಗಳವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೂ.11,77,700 ನಗದು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ ಸಾಗಾಟ ಪಕ್ರರಣಗಳಲ್ಲಿ ಹೊಸದುರ್ಗ ತಾಲೂಕಿನ ಮತ್ತೋಡು ಹೋಬಳಿ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ 8.6 ಲೀಟರ್ ಮದ್ಯ, ಚಿತ್ರದುರ್ಗ ತಾಲೂಕಿನ ದೇವಪುರ ಹಟ್ಟಿಯಲ್ಲಿ 12.960 ಲೀಟರ್ ಮದ್ಯ, ಹೊಳಲ್ಕೆರೆ ಹಾಗೂ ಚಳ್ಳಕೆರೆ ಪಟ್ಟಣದಲ್ಲಿ ತಲಾ 17.280 ಲೀಟರ್ ಮದ್ಯ ವಶಪಡಿಕೊಂಡು, ನಾಲ್ವರನ್ನು ಬಂಧಿಸಲಾಗಿದೆ. ಮದ್ಯ ಸಾಗಿಸಲು ಉಪಯೋಗಿಸಿದ 3 ಬೈಕು ಹಾಗೂ 1 ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪೆಟ್ಟಿಗೆ ಅಂಗಡಿ, ಡಾಬ, ಹೋಟೆಲ್‍ಗಳ ಮೇಲೆ ದಾಳಿ ಮಾಡಿ ಒಟ್ಟು 16.92 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಪ್ರಕರಣಗಳಿಂದ ಒಟ್ಟು ರೂ.29,930 ಮೌಲ್ಯದ 73.08 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ 29 ರಿಂದ ಏಪ್ರಿಲ್ 13ರ ವರೆಗೆ ಜಿಲ್ಲೆಯಲ್ಲಿ ಸಂಚಾರಿ ತನಿಖಾ ತಂಡದಿಂದ ರೂ. 27,87,920 ಹಾಗೂ ಸ್ಥಾನಿಕ ಪರಿಶೀಲನಾ ತಂಡದಿಂದ ರೂ. 13,70,000 ನಗದು ಸೇರಿ ಒಟ್ಟು ರೂ.41,57,920 ನಗದು ವಶಪಡಿಸಿಕೊಳ್ಳಲಾಗಿದೆ. ಇದರಲ್ಲ್ಲಿ ಪರಿಶೀಲನೆ ಬಳಿಕ ರೂ.5,00,000 ನಗದನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಅಬಕಾರಿ ಇಲಾಖೆಯಿಂದ ರೂ.2,53,373 ಮೌಲ್ಯದ 635.250 ಲೀಟರ್ ಮದ್ಯ ಹಾಗೂ ಪೊಲೀಸ್ ಇಲಾಖೆಯಿಂದ ರೂ.2,89,376 ಮೌಲ್ಯದ 740.610 ಲೀಟರ್ ಸೇರಿ ಒಟ್ಟು ರೂ.5,48,749 ಮೌಲ್ಯದ 1375.860 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಚುನಾವಣೆ ವೆಚ್ಚ ಸಂಬಂದಪಟ್ಟಂತೆ 1 ಹಾಗೂ ಅಬಕಾರಿ ಕಾನೂನು ಉಲ್ಲಂಘನೆ ಅಡಿ 59 ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.