ಬೆಂಗಳೂರು: ಅರೆ ಚುನಾವಣಾ ಆಯೋಗಕ್ಕೆ ಅದೇಕೆ ತೆಲೆ ಬಿಸಿ ಅಂತ ತೆಲೆಕೆರದುಕೊಳ್ಳುವ ಬೇಡಿ.! ಕರ್ನಾಟಕದಲ್ಲಿ ಚುನಾವಣಾ ಆಯೋಗಕ್ಕೆ ಇದೀಗ ಪೊರಕೆ ತಲೆಬಿಸಿ ಎದುರಾಗಿದ್ದು, ಮತದಾನಕ್ಕೂ 48 ಗಂಟೆ ಮೊದಲು ಎಲ್ಲ ಮತಗಟ್ಟೆ ಸುತ್ತಮುತ್ತ ಪೊರಕೆಯನ್ನು ಬ್ಯಾನ್ ಮಾಡಲಾಗಿದೆ.
ಏಕೆಂದರೆ, ಆಮ್ ಆದ್ಮಿ ಪಕ್ಷದ ಚಿಹ್ನೆ ಪೊರಕೆಯಾಗಿದೆ. ನೀತಿ ಸಂಹಿತೆಯಂತೆ ಮತದಾನದ ದಿನ ಈ ಪಕ್ಷದ ಚಿಹ್ನೆಯಾದ ಪೊರಕೆ ಅಥವಾ ಅದರ ಚಿತ್ರದ ಪ್ರದರ್ಶನವನ್ನು ಮತಗಟ್ಟೆಯ ನಿಗದಿತ ದೂರಕ್ಕೆ ನಿಷೇಧಿಸಬೇಕಾಗಿದೆ.
ಹೀಗಾಗಿ ಮತಗಟ್ಟೆಗಳಲ್ಲಿ ಸ್ವಚ್ಛತೆಗೆ ಬೇಕಾಗಿರುವ ಪೊರಕೆಗಳಿಗೆ ಚುನಾವಣಾ ಆಯೋಗವು ಗೇಟ್‌ಪಾಸ್‌ಗಳನ್ನು ನೀಡಿದೆ.