ಇಸ್ರೇಲ್: ಹೌದು ಮನುಷ್ಯರಿಗಷ್ಟೇ ಅಲ್ಲ, ಗಿಡಗಳಿಗೂ ಭಾವನೆಗಳಿವೆ ಎಂಬ ಸಿನಿಮಾದ ಡೈಲಾಗ್‌ಗಳನ್ನು ಕೇಳಿದಾಗ ಆಶ್ಚರ್ಯ ಸಹಜ. ಆದರೆ, ಇದು ಸತ್ಯ ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.
ಇಸ್ರೇಲ್‌ನ ಟೆಲ್ ಅವಿವ್ ವಿವಿ ಸಂಶೋಧಕರು ಹಸಿರುಮನೆಯೊಳಗೆ ಟೊಮೆಟೊ ಮತ್ತು ತಂಬಾಕು ಸಸ್ಯಗಳನ್ನು ಪರಿಶೋಧಿಸಿದ್ದಾರೆ.
ಅವುಗಳು ಹೈಡ್ರೀಕರಿಸಿದಾಗ ಮತ್ತು ಒತ್ತಡಕ್ಕೆ ಒಳಗಾದಾಗ ಅಳುವ ರೂಪದಲ್ಲಿ ವಿವಿಧ ರೀತಿಯ ಶಬ್ದಗಳನ್ನು ಹೊರಸೂಸಿವೆ. ಅವುಗಳನ್ನು ಅಲ್ಟ್ರಾಸಾನಿಕ್ ಮೈಕ್ರೊಫೋನ್ ಗಳಿಂದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.