ಮಂಗಳೂರು: ಮತೀಯ ಗುಂಡಾಗಿರಿ ಕೃತ್ಯ ಮಾಡಿದರೆ ನೇರವಾಗಿ ಅಂಥವರನ್ನು ಗಡಿಪಾರು ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿ, ಸಂಘ ಪರಿವಾರದ ಸಂಘಟನೆಗಳು ಸೇರಿ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ. ಗುಂಡಾಗಿರಿಯನ್ನು ಬೆಂಬಲಿಸುವ ಬಿಜೆಪಿಗೆ ಕ್ರಿಮಿನಲ್ ಬೆಂಬಲಿಸುವ ಪಕ್ಷವೆಂದು ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ ದಕ್ಷಿಣ ಕನ್ನಡದಿಂದ ಹೊರಹಾಕಲಾಗುವುದು ಎಂದಿದ್ದಾರೆ.