ಶ್ರೀಲಂಕಾ : ಹೌದು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ಈಗ ಬದುಕಲು ಒಂದು ಲಕ್ಷ ಕೋತಿಗಳನ್ನು ರಫ್ತು ಮಾಡಲಿದೆ. ಶ್ರೀಲಂಕಾ ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಚೀನಾಕ್ಕೆ ಒಂದು ಲಕ್ಷ ಕೋತಿಗಳನ್ನು ಮಾರಾಟ ಮಾಡಲು ಮುಂದಾಗಿದೆಯಂತೆ.!
ವರದಿಯೊಂದರ ಪ್ರಕಾರ, ಶ್ರೀಲಂಕಾ ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಚೀನಾಕ್ಕೆ ಒಂದು ಲಕ್ಷ ಕೋತಿಗಳನ್ನು ಮಾರಾಟ ಮಾಡಲು ಹೊರಟಿದೆ. ಶ್ರೀಲಂಕಾದ ಕೃಷಿ ಸಚಿವ ಮಹೀಂದ್ರ ಅಮರವೀರ ಈ ಮಾಹಿತಿಯನ್ನು ನೀಡಿದ್ದಾರೆ.
ಮಂಗಗಳ ಮಾರಾಟ ನಿರ್ಧಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಸಚಿವರು, ಚೀನಾಕ್ಕೆ ಮಾರಾಟವಾಗುತ್ತಿರುವ ಟಕ್ ಮಕಾಕಾ ಜಾತಿಯ ಮಂಗಗಳು ಸಾಮಾನ್ಯ ಮಂಗಗಳಾಗಿದ್ದು, ಅವುಗಳ ಸಂಖ್ಯೆ ಹೆಚ್ಚಾಗುತ್ತಿರುವ ರೀತಿಯಲ್ಲಿ ಬೆಳೆಗಳಿಗೆ ಅಪಾರ ಹಾನಿಯನ್ನುಂಟು ಮಾಡುತ್ತಿದೆ. ಕೋತಿಗಳನ್ನು ಮಾರಾಟ ಮಾಡುವುದರಿಂದ ಶ್ರೀಲಂಕಾ ಸರ್ಕಾರಕ್ಕೆ ನಮಗೆ ಅಗತ್ಯವಿರುವ ಭಾರೀ ಮೊತ್ತವನ್ನು ನೀಡುತ್ತದೆ. ಮಾರಾಟವಾಗುವ ಎಲ್ಲಾ ಕೋತಿಗಳನ್ನು ಚೀನಾದ 1000 ಕ್ಕೂ ಹೆಚ್ಚು ಮೃಗಾಲಯಗಳಲ್ಲಿ ಇರಿಸಲಾಗುತ್ತದೆಯಂತೆ.!