ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ.10ರಷ್ಟು ಶುಲ್ಕ ಏರಿಕೆ ಮಾಡಲಿದ್ದು, ಇದಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಸಮ್ಮತಿ ಸೂಚಿಸಿದೆ.
ಶೇ.20ರಷ್ಟು ಶುಲ್ಕ ಹೆಚ್ಚಳದ ಕೋರಿಕೆಯನ್ನು ವೈದ್ಯಕೀಯ ಕಾಲೇಜುಗಳು ಸರ್ಕಾರದ ಮುಂದಿಟ್ಟಿದ್ದವು. ಹಿಂದಿನ ವರ್ಷವಷ್ಟೇ ಅಲ್ಪಸಂಖ್ಯಾತರ ಒಡೆತನ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ಏರಿಸಲಾಗಿದ್ದು, ಈಗ ಆ ಕಾಲೇಜುಗಳನ್ನು ಹೊರತುಪಡಿಸಿ, ಉಳಿದ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.