ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡಿದ್ದು, ಇಂದು ಸಂಜೆಯೊಳಗೆ ಉತ್ತರಿಸುವಂತೆ ಸೂಚಿಸಿದೆ.
ಪ್ರಧಾನಿ ಮೋದಿಯನ್ನು ನಾಲಾಯಕ್ ಎಂದು ಜರಿದಿದ್ದ ‘ಕೈ’ ಶಾಸಕ ಪ್ರಿಯಾಂಕ್ ಖರ್ಗೆಗೂ ಆಯೋಗ ನೋಟಿಸ್ ನೀಡಿದೆ. ಮುಂದುವರಿದ ಭಾಗವಾಗಿ ಭಾಷಣದಲ್ಲಿ ಜಾತಿ ಹೆಸರು ಹೇಳಿ ಮತ ಕೇಳಿದ್ದಕ್ಕೆ ಮೊಣಕಾಲ್ಮೂರು ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿಗೂ ನೋಟಿಸ್ ನೀಡಲಾಗಿದೆ.