ಬೆಂಗಳೂರು:: ಬಿಜೆಪಿ ತೊರೆದವರಿಗೆ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ ಎಂದಿದ್ದ ಅರುಣ್ ಸಿಂಗ್‌ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಪಕ್ಷ ತೊರೆದವರಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್ ಎನ್ನುವ ಶಾಸಕರ ಕಳ್ಳತನದಲ್ಲಿ ಹೆಸರುವಾಸಿಯಾದ ಬಿಜೆಪಿಯ ಮಾತು ಜಗತ್ತಿನ ಅತಿ ದೊಡ್ಡ ಹಾಸ್ಯ.
ಆಪರೇಷನ್ ಕಮಲ ಹೆಸರಲ್ಲಿ ಶಾಸಕರ ಕಳ್ಳತನ ಮಾಡುವವರಿಗೆ ನೈತಿಕತೆ ಇದ್ದರೆ ಇತರ ಪಕ್ಷದ ಶಾಸಕರನ್ನು ಅಪಹರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಲಿ. ಅರುಣ್ ಸಿಂಗ್, ನಿಮ್ಮಿಂದ ಸಾಧ್ಯವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.