ಬೆಂಗಳೂರು: ವಾಹನ ನೋಂದಣಿ ಹಾಗೂ ಡ್ರೈವಿಂಗ್ ಲೈಸೆನ್ಸ್‌ಗೆ ಚಿಪ್ ಆಧಾರಿತ ಅಥವಾ ಸ್ಮಾರ್ಟ್ ಕಾರ್ಡ್ ವಿತರಣೆ ವ್ಯವಸ್ಥೆ ಕೈಬಿಟ್ಟು, ಲ್ಯಾಮಿನೇಟೆಡ್ ಪ್ರತಿ ವಿತರಣಾ ವ್ಯವಸ್ಥೆ ಜಾರಿಗೊಳಿಸುವಂತೆ ಕೇಂದ್ರ ಸಾರಿಗೆ ಇಲಾಖೆ ಎಲ್ಲ ರಾಜ್ಯಗಳಿಗೆ ಆದೇಶಿಸಿದೆ.
ಇದರಿಂದ ಕರ್ನಾಟಕದಲ್ಲಿಯೂ ಈಗ ಜಾರಿಯಲ್ಲಿರುವ ಚಿಪ್ ಆಧಾರಿತ ಸ್ಮಾರ್ಟ್‌ಕಾರ್ಡ್ ರದ್ದುಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಇನ್ನುಮುಂದೆ ಹೈಪೋಥಿಕೇಷನ್ ರದ್ದತಿಗೆ 200ರೂ. ಶುಲ್ಕ ಹಾಗೂ ಸ್ಮಾರ್ಟ್ ಕಾರ್ಡ್‌ಗೆ 217ರೂ. ಹೆಚ್ಚುವರಿ ಹಣ ಪಾವತಿಸಬೇಕಿಲ್ಲ.