ಉಡುಪಿ: ಹಿಂದೂ ಧರ್ಮದಲ್ಲಿ ವೈವಾಹಿಕ ಜೀವನಕ್ಕೆ ಅದರದ್ದೇ ಆದ ಪಾವಿತ್ರ್ಯವಿದ್ದು, ಸಲಿಂಗವಿವಾಹಕ್ಕೆ ಒಪ್ಪಿಗೆ ನೀಡುವುದು ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಲಿಂಗ ವಿವಾಹದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿರುವ ಹಿನ್ನೆಲೆ ಮಾತನಾಡಿರುವ ಅವರು, ಈ ವಿಚಾರದಲ್ಲಿ ಹಿಂದೂ ಸಮಾಜದ ವಿದ್ವಾಂಸರನ್ನು, ಧರ್ಮಶಾಸ್ತ್ರಗಳನ್ನು ಅರಿತಿರುವವರನ್ನು ಜೊತೆ ಸೇರಿಸಿ, ಅವರ ಜೊತೆ ಸಮಾಲೋಚನೆ ಮಾಡಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.