Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಭದ್ರಾ ಅಚ್ಚುಕಟ್ಟು ರೈತರಿಗೆ ಗುಡ್ ನ್ಯೂಸ್.!

0

 

ಶಿವಮೊಗ್ಗ: ಇಂದಿನಿಂದ ಅಂದರೆ ಆಗಸ್ಟ್ 10ರಿಂದ ಮುಂದಿನ ನೂರು ದಿನಗಳ ಕಾಲ ಭದ್ರಾ ಜಲಾಶಯದ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅಚ್ಚುಕಟ್ಟು ಪ್ರದೇಶದ ಪ್ರಾಧಿಕಾರ(ಕಾಡಾ) ಪ್ರಕಟಣೆ ಹೊರಡಿಸಿದೆ.

ಆಗಸ್ಟ್ 10ರ ರಾತ್ರಿಯಿಂದ ಭದ್ರಾ ಎಡದಂಡೆ, ಬಲದಂಡೆ ನಾಲೆ, ಅನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾ ನಾಲೆ, ಹರಿಹರ ಮತ್ತು ಗೋಂದಿ ನಾಲೆಗಳಿಗೆ ನೀರು ಬಿಡಲಾಗುತ್ತದೆ ಎಂದು ತಿಳಿಸಲಾಗಿದೆ.

ಭದ್ರಾ ಬಲದಂಡೆ ಕಾಲುವೆಗೆ 2650 ಕ್ಯುಸೆಕ್ಸ್ ಹಾಗೂ ಎಡದಂಡೆಗೆ 380 ಕ್ಯಸೆಕ್ಸ್ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಎನ್​. ಸುಜಾತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.