ಬೆಂಗಳೂರು: ಚುನಾವಣಾ ಆಯೋಗದ ನಿಯಮದಂತೆ ಗೂಗಲ್ ಪೇ, ಫೋನ್‌ಪೇ ಸೇರಿದಂತೆ UPI ಹಾಗೂ ಇತರ ಇ-ಅಕೌಂಟ್ ಬಳಕೆ ಬಗ್ಗೆ ಹದ್ದಿನಕಣ್ಣು ಇಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಒಂದೇ ಅಕೌಂಟ್‌ನಿಂದ 50 ರಿಂದ 100 ಮಂದಿಗೆ ಪದೇ ಪದೇ ಹಣ ಪಾವತಿಯಾಗುತ್ತಿದ್ದರೆ, ಅಂತಹವರ ವಿರುದ್ಧ ನೀತಿಸಂಹಿತೆಯ ನಿಯಮದಡಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು ಕೂಡ ಈ ಸಂಬಂಧ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.