ಬೆಂಗಳೂರು: ಪತಿ, ಪತ್ನಿ ತೆರಿಗೆ ಪಾವತಿದಾರರಾಗಿದ್ದರೆ ಗೃಹಲಕ್ಷ್ಮಿ ಯೋಜನೆ ಅನ್ವಯಿಸಲ್ಲವೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.
ಈ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಕ್ಕಳು ತೆರಿಗೆ ಪಾವತಿಸುವವರಾಗಿದ್ದರೂ ಮಹಿಳೆ ಫಲಾನುಭವಿ ಆಗಲು ಅರ್ಹಳಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಯೋಜನೆಯ ಲಾಭ ಪಡೆಯಲು ಮನೆಯೊಡತಿ ಬಳಿ ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಗಳಲ್ಲಿ ಒಂದು ಇರಲೇಬೇಕು. ಇಲ್ಲವಾದರೆ ಫಲಾನುಭವಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.