Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

GT vs CSK : ಗುಜರಾತ್ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು-10 ನೇ ಬಾರಿಗೆ ಫೈನಲ್’ಗೆ ಲಗ್ಗೆ ಇಟ್ಟ ಸಿಎಸ್ ಕೆ

0

ಚೆನ್ನೈ: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದೋನಿ ಬಳಗ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಆ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ. 10ನೇ ಬಾರಿಗೆ ಪೈನಲ್ ಪ್ರವೇಶಿಸಿದೆ ಎನ್ನುವ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.

ಗುಜರಾತ್ ಟೈಟಾನ್ಸ್​ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 15 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಎಸ್​ಕೆ ತಂಡಕ್ಕೆ ಆರಂಭಿಕರಾದ ಡೆವೊನ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭದೊಂದಿಗೆ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​​ ನಷ್ಟಕ್ಕೆ 172 ರನ್​ ಗಳಿಸಿತು.

NDTV ಸಂಸ್ಥಾಪಕ ಪ್ರಣಯ್ ರಾಯ್ ದಂಪತಿ ವಿದೇಶ ಪ್ರಯಾಣಕ್ಕೆ ದೆಹಲಿ ಹೈಕೋರ್ಟ್ ಅನುಮತಿ

ಗೆಲುವಿಗೆ 173 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್, 20 ಓವರ್​ಗಳಲ್ಲಿ 157 ರನ್​ ಗಳಿಗೆ ಸರ್ವಪತನ ಕಂಡಿತು. ಈ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯ ಆಡಬೇಕಿದೆ. ಬುಧವಾರ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ ಗುಜರಾತ್ ಟೈಟಾನ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಸಿಎಸ್​ಕೆ ವಿರುದ್ಧ ಫೈನಲ್ ಆಡಲಿದೆ.

ಸಿಎಸ್ ಕೆ ಪರ ಋತುರಾಜ್​ ಗಾಯಕ್ವಾಡ್​ ಹಾಗೂ ಎಡಗೈ ಬ್ಯಾಟ್ಸ್​ಮನ್​ ಡೆವೋನ್​ ಕಾನ್ವೆ, ಗುಜರಾತ್​ ಬೌಲರ್​ಗಳ ಸಂಘಟಿತ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಪರಿಣಾಮ, ಮೊದಲ ವಿಕೆಟ್​ಗೆ ಬರೋಬ್ಬರಿ 87 ರನ್ ಸೇರಿಸಿದರು. ಅರ್ಧಶತಕ ಸಿಡಿಸಿ ಗಾಯಕ್ವಾಡ್​ ಚೆನ್ನೈ ಗೆಲುವಿಗೆ ನೆರವಾದರು.

Leave A Reply

Your email address will not be published.