Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

GT vs SRH, IPL 2023: ಐಪಿಎಲ್​ನಲ್ಲಿಂದು ಗುಜರಾತ್-ಹೈದರಾಬಾದ್ ಮುಖಾಮುಖಿ

0

IPL 2023: ಇಂದು ಐಪಿಎಲ್ 2023 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಆ್ಯಡಂ ಮರ್ಕ್ರಮ್ ಅವರ ಸನ್​ರೈಸರ್ಸ್ ಹೈದರಾಬಾದ್ (GT vs SRH) ಮುಖಾಮುಖಿ ಆಗುತ್ತಿದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಪ್ಲೇ ಆಫ್ ಲೆಕ್ಕಚಾರ ಆರಂಭವಾಗಿದ್ದು ಒಂದು ಪಂದ್ಯದ ಸೋಲು-ಗೆಲುವು ಮೂರನೇ ತಂಡಕ್ಕೆ ವರದಾನವಾಗುತ್ತಿದೆ. ಇದರ ನಡುವೆ ಇಂದು ಐಪಿಎಲ್ 2023 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಆ್ಯಡಂ ಮರ್ಕ್ರಮ್ ಅವರ ಸನ್​ರೈಸರ್ಸ್ ಹೈದರಾಬಾದ್ (GT vs SRH) ಮುಖಾಮುಖಿ ಆಗುತ್ತಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಆಗಲಿದೆ. ಎಸ್​ಆರ್​ಹೆಚ್ ಸೋತರೆ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಇವರಿಬ್ಬರ ನಡುವಣ ಸೋಲು-ಗೆಲುವು ಆರ್​ಸಿಬಿಗೆ (RCB) ಆಗಲಿ ಅಥವಾ ಇತರೆ ಯಾವ ತಂಡದ ಮೇಲೂ ಪರಿಣಾಮ ಬೀರಿವುದಿಲ್ಲ.

ಈ ಮೂರು ಆಹಾರದಿಂದ ದೂರವಿದ್ರೆ ಹಾರ್ಟ್‌ಅಟ್ಯಾಕ್ ಆಗೋ ಛಾನ್ಸ್‌ ಕಡಿಮೆ

ಗುಜರಾತ್:

ಜಿಟಿ ತಂಡ ಆಡಿರುವ 12 ಪಂದ್ಯಗಳಲ್ಲಿ ಎಂಟು ಗೆಲುವು 4 ಸೋಲು ಕಂಡು 16 ಅಂಕ ಪಡೆದುಕೊಂಡಿದ್ದು ಟಾಪ್​ನಲ್ಲಿದೆ. ಹಾರ್ದಿಕ್ ಪಡೆ ಹಿಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತಿತ್ತು. ಹೀಗಿದ್ದರೂ ಪ್ಲೇಯರ್ಸ್ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್- ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ ಕಡೆಯಿಂದ ಒಂದು ಉತ್ತಮ ಆಟ ಬರಬೇಕಿದೆ.

ವೃದ್ದಿಮಾನ್ ಸಾಹ ಹಾಗೂ ಶುಭ್​ಮನ್ ಗಿಲ್ ಸ್ಫೋಟಕ ಆರಂಭ ಒದಗಿಸಿದ್ದಾರೆ. ಡೇವಿಡ್ ಮಿಲ್ಲರ್, ವಿಜಯ್ ಶಂಕರ್ ಹಾಗೂ ರಾಹುಲ್ ತೇವಾಟಿಯ ಫಿನಿಶರ್​ಗಳಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ 32 ಎಸೆತಗಳಲ್ಲಿ 10 ಸಿಕ್ಸರ್ ಸಿಡಿಸಿ ಅಜೇಯ 79 ರನ್ ಚಚ್ಚುದ ಮೂಲಕ ರಶೀದ್ ಖಾನ್ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶ್ವಾ ಲಿಟಲ್ ಹಾಗೂ ನೂರ್ ಅಹ್ಮದ್ ಮಾರಕವಾಗಿದ್ದಾರೆ.

ಹೈದರಾಬಾದ್​:

ಸನ್​ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ ಟೇಬಲ್​ನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ತಂಡದಿಂದ ಸಂಘಟಿತ ಪ್ರದರ್ಶನ ಬರುತ್ತಿಲ್ಲ. ಅಭಿಷೇಕ್ ಶರ್ಮಾ, ಅನ್ಮೋಲ್​ಪ್ರೀತ್ ಸಿಂಗ್, ರಾಹುಲ್ ತ್ರಿಪಾಠಿ, ನಾಯಕ ಮರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಗ್ಲೆನ್ ಪಿಲಿಪ್ಸ್ ಕೆಲ ಪಂದ್ಯ ಆಡಿದರೆ ಉಳಿದ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಬೌಲಿಂಗ್​ನಲ್ಲಿ ಹೈದರಬಾದ್ ಪರ ಭುವನೇಶ್ವರ್ ಕುಮಾರ್ ಬಿಟ್ಟರೆ ಮತ್ಯಾರು ಮಾರಕವಾಗಿ ಗೋಚರಿಸುತ್ತಿಲ್ಲ. ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್ ಲಯಕಂಡುಕೊಳ್ಳಬೇಕಿದೆ. ಮಯಾಂಕ್ ಮಾರ್ಕಂಡೆ ಸ್ಪಿನ್ ಕೆಲಬಾರಿಯಷ್ಟೆ ಕೆಲಸ ಮಾಡಿದೆ.

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಜೋಶ್ವಾ ಲಿಟಲ್, ಮೋಹಿತ್ ಶರ್ಮಾ, ಸಾಯಿ ಸುದರ್ಶನ್, ಶ್ರೀಕರ್ ಭರತ್, ಶಿವಂ ಮಾವಿ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ದಾಸುನ್ ಶಾನಕ, ಓಡನ್ ಸ್ಮಿತ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್.

ನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಆ್ಯಡಂ ಮರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಅಕೇಲ್ ಹೊಸೈನ್, ಉಮ್ರಾನ್ ಮಲಿಕ್, ಮಾರ್ಕೊ ಜಾನ್ಸೆನ್, ಟಿ ನಟರಾಜನ್, ವಿವ್ರಾಂತ್ ಶರ್ಮಾ, ಗ್ಲೆನ್ ಫಿಲಿಪ್ಸ್, ಮಯಾಂಕ್ ಡಾಗರ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಆದಿಲ್ ರಶೀದ್, ಕಾರ್ತಿಕ್ ತ್ಯಾಗಿ, ಉಪೇಂದ್ರ ಯಾದವ್, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ನಿತೀಶ್ ರೆಡ್ಡಿ.

Leave A Reply

Your email address will not be published.