ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಮಳೆ ಸುರಿದ್ದು, ಈ ನಡುವೆ ನಗರದ ಹಲುವ ಭಾಗಗಳಲ್ಲಿ ನೀರು ತುಂಬಿಕೊಂಡ ಘಟನೆ ಕೂಡ ನಡೆದಿದೆ. ಈ ನಡುವೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಕೊಚ್ಚಿಕೊಂಡು ಹೋಗಿದ್ದು, ಹಲವು ನಾಗರೀಕರು ಧೀಡಿರ್ ಮಳೆಗೆ ಪರದಾಡಿದರು.
ಇದಲ್ಲದೇ ಹುಬ್ಬಳ್ಳಿ ಮಸ್ಟರಿಂಗ್ ಕೇಂದ್ರಕ್ಕೆ ಕರ್ತವ್ಯ ನಿರ್ವಹಣೆಗೆ ಆಗಮಿಸಿದ ಚುನಾವಣಾ ಸಿಬ್ಬಂದಿಗಳು ಪರದಾಡಿದ ಸನ್ನಿವೇಶ ಕಂಡು ಬಂದಿದದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯಾಸಪಟ್ಟ ಸಿಬ್ಬಂದಿ ಕುರ್ಚಿಗಳನ್ನೇ ತಲೆ ಮೇಲೆ ಹೊತ್ತು ತೆರಳಿದರು