ಬನಾರಸ್: ವಿಜ್ಞಾನ ಎಷ್ಟೇ ಮುಂದುವರಿದರೂ ದೇಶದ ಹಲವೆಡೆ ಮೂಢನಂಬಿಕೆಗಳು ನಿಂತಿಲ್ಲ. ಏನು ತಿಳಿಯದ ಪುಟ್ಟ ಕಂದಮ್ಮಗಳಿಗೆ ಹಿಂಸೆ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಪೂಜಾರಿಯೊಬ್ಬ ಮಗುವನ್ನು ಎತ್ತಿಕೊಂಡು ಬಿಸಿ ಹಾಲಿನಿಂದ ಸ್ನಾನ ಮಾಡಿಸುತ್ತಾನೆ. ನೋವು ತಡೆದುಕೊಳ್ಳಲಾಗದೆ ಪುಟ್ಟ ಬಾಲಕಿ ಅಳುತ್ತಿದ್ದರೂ ಹಾಲನ್ನು ಸುರಿಯಲಾಗಿದೆ. ಈ ವಿಚಿತ್ರ ಸಂಸ್ಕೃತಿಯು ಯುಪಿಯ ಬನಾರಸ್ ಸುತ್ತಮುತ್ತ ನಡೆದ ಕರಹ ಪೂಜೆಯ ಒಂದು ಭಾಗವಾಗಿದೆಯಂತೆ.!