ಚಿತ್ರದುರ್ಗ: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ತಾಲೂಕಿನ ಸೀಬಾರ ಬಳಿ ಮತಪ್ರಚಾರ ಸಭೆಯಲ್ಲಿ ಮಾತನಾಡಿ, ಆಂಜನೇಯ ಅವರಿಗೆ ಎಂಎಲ್ಸಿ ಮಾಡಿಕೊಂಡು ಮಂತ್ರಿ ಮಾಡುತ್ತೇವೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಜ್ಯ ಸುತ್ತಾಡಿ ಎಂದು ಎಐಸಿಸಿ ಸೂಚನೆ ಕೊಟ್ಟಿತ್ತು. ಆದರೆ, ಹೊಳಲ್ಕೆರೆ ಕ್ಷೇತ್ರದ ಜನರ, ಮುಖಂಡರ ಒತ್ತಾಯಕ್ಕೆ ಮಣಿದು ಈ ಎಲ್ಲ ಹುದ್ದೆಗಳನ್ನು ತ್ಯಾಗ ಮಾಡಿದ್ದಾರೆ. ಆಂಜನೇಯ ರಾಜ್ಯ ನಾಯಕರು. ಅವರ ಗೆಲುವು ಪಕ್ಷ ಮತ್ತು ರಾಜ್ಯಕ್ಕೆ ಅಗತ್ಯವಾಗಿದೆ ಎಂದರು.
ಆಂಜನೇಯ ಅವರಿಗೆ ಚುನಾವಣೆ ಅಗತ್ಯವಿರಲಿಲ್ಲ. ನಿಮ್ಮೇಲ್ಲರ ಹಕ್ಕೊತ್ತಾಯಕ್ಕೆ ಮಣಿದು ಸ್ಪರ್ಧಿಸಿದ್ದಾರೆ. ಆದ್ದರಿಂದ ಈ ಬಾರಿ ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಬೇಕಿದ್ದು, ಚುನಾವಣೆಗೆ ನಿಲ್ಲಿಸಿದ ನಿಮ್ಮಗಳ ಜವಾಬ್ದಾರಿ ಹೆಚ್ಚು ಇದೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನನಗೆ ರಾಜಕೀಯ ಸ್ಥಾನಮಾನ ದೊರೆಯಲು ಮುಖ್ಯ ಕಾರ್ಯಕರ್ತರು, ಹೊಳಲ್ಕೆರೆ, ಭರಮಸಾಗರ ಕ್ಷೇತ್ರದ ಜನರು.ಕಳೆದ ವಾರ ಮಾಜಿ ಶಾಸಕ ಪಿ.ರಮೇಶ್ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಬಂದಿದ್ದು, ಅಂದು ಅವರ ಪುತ್ರ, ಜಿಪಂ ಮಾಜಿ ಸದಸ್ಯ ಆರ್.ಶಿವಕುಮಾರ್ ಇರಲಿಲ್ಲ. ಆದರೆ, ಇಂದು ಸಾವಿರಾರು ಬೆಂಬಲಿಗರ ಜೊತೆಗೆ ಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದ್ದಾರೆ. ಅವರಿಂದ ಪಕ್ಷಕ್ಕೆ ಆನೆಬಲ ಬಂದAತೆ ಆಗಿದೆ ಎಂದು ಹೇಳಿದರು.
ಚುನಾವಣೆ ಪ್ರಚಾರ ಆರಂಭಿಸಿದಾಗ ನನ್ನ ನಿರೀಕ್ಷೆಗೂ ಮೀರಿ ಸಾಧು ಲಿಂಗಾಯತರು, ವೀರಶೈವರು, ಯಾದವರು, ಕಾಡುಗೊಲ್ಲರು, ನೊಣಬರು, ಕುಂಚಿಟಿಗರು, ನಾಯಕ ಸಮುದಾಯದವರು, ಮಡಿವಾಳ, ಮುಸ್ಲಿಂ, ಸವಿತಾ ಸಮಾಜ, ಲಂಬಾಣಿ, ಬೋವಿ ಸಮುದಾಯ, ಕುರುಬರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಊರುಗಳಿಗೆ ನಾನು ಮತಪ್ರಚಾರಕ್ಕೆ ಬರುವ ಸುದ್ದಿ ತಿಳಿದು ಸಾವಿರಾರು ರೂಪಾಯಿ ಖರ್ಚು ಮಾಡಿ ಹೂವಿನ ಮಳೆಯನ್ನೇ ಸುರಿಸಿ ಸ್ವಾಗತಿಸುತ್ತಿದ್ದಾರೆ. ನಿಜಕ್ಕೂ ನನಗೆ ನಿಮ್ಮ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದರು.
ನಾನು ಸಚಿವನಾದ ಸಮಯದಲ್ಲಿ ಕುಂಚಿಟಿಗ ಸಮಯದಾಯಕ್ಕೆ 2 ಎ ಮೀಸಲಾತಿ ನೀಡುವ ವಿಚಾರಕ್ಕೆ ಕುಲಶಾಸ್ತç ಅಧ್ಯಯನ ಮಾಡಲು ವಿಶೇಷ ಸ್ಥಾನಮಾನ ದೊರಕಲು ಶ್ರಮಿಸಿದ್ದೇನೆ.
ಕಾಡುಗೊಲ್ಲರಿಗೆ ನಾಗರೀಕ ಸೌಲಭ್ಯ ಕಲ್ಪಿಸಲು ಅವರನ್ನು ಅರೆ ಅಲೆಮಾರಿ ಜಾತಿಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಶ್ರಮಿಸಿದ್ದೇನೆ. ಇನ್ನೂ ಹೆಚ್ಚು ಕೆಲಸ ಮಾಡಲು ಜನರ ಆಶೀರ್ವಾದ ಮಾಡಿ ಎಂದು ತಿಳಿಸಿದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಜೀವನದ ಆರಂಭದಿAದಲೂ ಹೋರಾಟದ ಮೂಲಕ ಎತ್ತರಕ್ಕೆ ಬೆಳೆದಿರುವ ಆಂಜನೇಯ, ಈ ಬಾರಿ ಜನರಿಗಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಅವರ ಗೆಲುವು ರಾಜ್ಯದಲ್ಲಿಯೇ ದಾಖಲು ಆಗುವ ರೀತಿ ಹೆಚ್ಚು ಮತಗಳು ಲಭಿಸಬೇಕು. ಈ ಮೂಲಕ ಬಿಜೆಪಿ ದುರಾಡಳಿತ ಅಂತ್ಯಗೊಳಿಸಲು ಹೊಳಲ್ಕೆರೆ ಕ್ಷೇತ್ರದ ಜನರೇ ಮುನ್ನುಡಿ ಬರೆಯಬೇಕು ಎಂದು ಕೋರಿದರು.
ಶಾಸಕ ಎಂ.ಚಂದ್ರಪ್ಪ ಅವರ ಅಹಂಕಾರ ಮಿತಿ ಮೀರಿದೆ. ಅನೇಕ ಹಳ್ಳಿಗಳಲ್ಲಿ ಅವರನ್ನು ಸೋಲಿಸಿ, ಆಂಜನೇಯ ಅವರನ್ನು ಗೆಲ್ಲಿಸಿ ಎಂಬ ಘೋಷಣೆ ಜೋರಾಗಿದೆ. ಇದೇ ಕಾರಣಕ್ಕೆ ಆಂಜನೇಯ ಬರ್ತಾರೆ ಅಂದ್ರೆ ಹಳ್ಳಿಗಳಲ್ಲಿ ಜನಸಾಗರವೇ ಸೇರುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಮಾತನಾಡಿ, ಎಚ್. ಆಂಜನೇಯ ಅವರು ಕರ್ನಾಟಕದ ಎಲ್ಲ ವರ್ಗದ ನಾಯಕರು. ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಶಕ್ತಿ ತುಂಬಲು ಮಾಜಿ ಶಾಸಕ ಪಿ.ರಮೇಶ್ ಅವರ ಪುತ್ರ ಶಿವಕುಮಾರ್ ಅವರು ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ತೊರೆದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದರು.