ಬೆಂಗಳೂರು: 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 158 ರ ಪ್ರಕಾರ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಆರನೇ ಒಂದಕ್ಕಿಂತ ಕಡಿಮೆ ಮತಗಳನ್ನು ಪಡೆದರೆ ಅಂಥ ಅಭ್ಯರ್ಥಿಯ ಠೇವಣಿಯನ್ನು ಚುನಾವಣಾ ಆಯೋಗವು ಮುಟ್ಟುಗೋಲು ಹಾಕಿಕೊಳ್ಳುತ್ತದೆ.
ಅಭ್ಯರ್ಥಿಯು ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಪಡೆದ ಒಟ್ಟು ಮಾನ್ಯವಾದ ಮತಗಳಲ್ಲಿ ಆರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಪಡೆದಿದ್ದರೆ ಆಯೋಗವು ಠೇವಣಿಯನ್ನು ವಾಪಸ್ ಮಾಡುತ್ತದೆ. ಹಾಗೆಂದು, ಅಭ್ಯರ್ಥಿಯು ಚಲಾವಣೆಯಾದ ಮಾನ್ಯವಾದ ಮತಗಳ ಸಂಖ್ಯೆಯಲ್ಲಿ ನಿಖರವಾಗಿ ಆರನೇ ಒಂದು ಭಾಗವನ್ನಷ್ಟೇ ಪಡೆದಿದ್ದರೆ ಕೂಡ ಠೇವಣಿ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.