ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್ ಅವರು ಇಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅಫಿಡವಿಟ್ ಪ್ರಕಾರ ಸದ್ಯ ಎಂಟಿಬಿ ಅವರ ಅಧಿಕೃತ ಆಸ್ತಿ 1510 ಕೋಟಿ ರೂ. ಮೌಲ್ಯದ್ದಾಗಿದೆ. ಕಳೆದ 2019ರ ಉಪ ಚುನಾವಣೆ ವೇಳೆ ನನ್ನ ಆಸ್ತಿ 1015 ಕೋಟಿ ರೂ. ಇದೆ ಎಂದು ಎಂಟಿಬಿ ಘೋಷಿಸಿಕೊಂಡಿದ್ದರು.
ಇದರೊಂದಿಗೆ ಕೇವಲ ನಾಲ್ಕೇ ವರ್ಷಗಳಲ್ಲಿ ಬರೋಬ್ಬರಿ 495 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸಿದ್ದಾರೆ.