ದೆಹಲಿ: ಈ ವಿಚಾರವನ್ನು ಹೇಳಿದವರು ಯಾರು ಅಲ್ಲ . ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಡಾ.ಪರಕಾಲ ಪ್ರಭಾಕರ್ ..!
ಅವರು ಅರ್ಥಶಾಸ್ತ್ರಜ್ಞರೂ ಆಗಿದ್ದಾರೆ. ಮತ್ತೊಮ್ಮೆ ಅಂದರೆ 2024ಕ್ಕೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ, ಅದು ರಾಷ್ಟ್ರದ ಆರ್ಥಿಕತೆಗೆ ಮಾತ್ರವಲ್ಲದೇ, ಒಟ್ಟಾರೆ ರಾಷ್ಟ್ರಕ್ಕೆ ವಿಪತ್ತು ತರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ 2014ರಲ್ಲಿ ಗೆದ್ದ ಬಿಜೆಪಿ ಸರ್ಕಾರ ಹಿಂದುತ್ವವನ್ನು ಕುತಂತ್ರದಿಂದ ಕಳ್ಳಸಾಗಣೆ ಮಾಡಿದೆ ಎಂದು ಹೇಳಿದ್ದಾರೆ.