ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ನಿಗಮ ಮಂಡಳಿ & ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಖಾಲಿಯಿರುವ 757 ಹುದ್ದೆಗೆ ನೇಮಕ ನಡೆಸಲಿದೆ.
ನೀತಿ ಸಂಹಿತೆ ಜಾರಿ ಹಿನ್ನೆಲೆ ನೇಮಕ ಪ್ರಕ್ರಿಯೆ ಬಗ್ಗೆ ಅಭ್ಯರ್ಥಿಗಳಲ್ಲಿ ಗೊಂದಲವಿತ್ತು. ಮಾ.24ರಂದೇ ಅಧಿಸೂಚನೆ ಹೊರಡಿಸಿರುವ ಕಾರಣ ನಿಗದಿಯಂತೆ ನೇಮಕ ಪ್ರಕ್ರಿಯೆ ನಡೆಸಲಿದ್ದು ಏ.15ರಂದು ವಿವರವಾದ ಅಧಿಸೂಚನೆ ಪ್ರಕಟಿಸುವುದಾಗಿಯೂ KEA ಸ್ಪಷ್ಟಪಡಿಸಿದೆ.
ಏ.17ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದ್ದು ಮೇ 17 ಕೊನೆದಿನವಾಗಿದೆ.