Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

IPL 2023: ಧರ್ಮಶಾಲಾದಲ್ಲಿಂದು ಡೆಲ್ಲಿ-ಪಂಜಾಬ್ ಫೈಟ್; ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಪಂಜಾಬ್

0

ಧರ್ಮಶಾಲಾ: ಪಂಜಾಬ್‌ ಕಿಂಗ್ಸ್ ಕೊನೆ ಬಾರಿಗೆ ಪ್ಲೇ-ಆಫ್‌ ಪ್ರವೇಶಿಸಿದ್ದು 2014ರಲ್ಲಿ. ಆಗ ತಂಡದ ಹೆಸರು ಕಿಂಗ್ಸ್ ಇಲೆವೆನ್‌ ಪಂಜಾಬ್‌ ಎಂದಿತ್ತು. 2015ರಿಂದ ತಂಡ ಗುಂಪು ಹಂತದಲ್ಲಿ ಕೇವಲ 2 ಬಾರಿ 14 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದಿದೆ. ಈ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್ ಇನ್ನೂ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಂಡಿದ್ದು, 8ನೇ ಸ್ಥಾನದಿಂದ ಮೇಲೇರಿ ಅಗ್ರ-4ರಲ್ಲಿ ಸ್ಥಾನ ಪಡೆಯಬೇಕಿದ್ದರೆ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬುಧವಾರ ಇಲ್ಲಿ ನಡೆಯಲಿರುವ ಪಂದ್ಯ ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಎನಿಸಿದೆ. ಬಾಕಿ ಇರುವ 2 ಪಂದ್ಯಗಳನ್ನು ಗೆದ್ದರೆ 16 ಅಂಕಕ್ಕೆ ತಲುಪಲಿದೆಯಾದರೂ, ನೆಟ್‌ ರನ್‌ರೇಟ್‌ ಸುಧಾರಣೆಗೊಳ್ಳಬೇಕಿದ್ದರೆ ದೊಡ್ಡ ಗೆಲುವುಗಳು ಅಗತ್ಯವಿದೆ. ಪಂಜಾಬ್ ತಂಡವು ಗೆಲುವು ದಾಖಲಿಸಬೇಕಿದ್ದರೆ, ಪ್ರಭ್‌ಸಿಮ್ರನ್ ಸಿಂಗ್, ಶಿಖರ್ ಧವನ್ ಉತ್ತಮ ಆರಂಭ ಒದಗಿಸಿಕೊಡಬೇಕಿದೆ. ತಂಡದ ಎಲ್ಲಾ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ತೋರಿಸಿದರೆ, ಡೆಲ್ಲಿ ಮಣಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬಹುದು.

ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲಿಮ್ ರಾಷ್ಟ್ರ’ ಎಂಬ ಪೋಸ್ಟ್ ಹಾಕಿದ್ದ ಯುವಕನ ಬಂಧನ

ಮತ್ತೊಂದೆಡೆ ಡೆಲ್ಲಿ ಈಗಾಗಲೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿದ್ದು, ತಂಡಕ್ಕಿದು ಪ್ರತಿಷ್ಠೆಯ ಪಂದ್ಯವಷ್ಟೇ. ಆದರೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ತಪ್ಪಿಸಿಕೊಳ್ಳಲು ಡೇವಿಡ್ ವಾರ್ನರ್‌ ಪಡೆ ಹೋರಾಟ ನಡೆಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬ್ಯಾಟಿಂಗ್‌ನಲ್ಲಿ ಹೆಚ್ಚಾಗಿ ಡೇವಿಡ್ ವಾರ್ನರ್, ಫಿಲ್ ಸಾಲ್ಟ್, ರಿಲೇ ರೂಸ್ಸೌ ಹಾಗೂ ಮಿಚೆಲ್ ಮಾರ್ಷ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಆಲ್ರೌಂಡರ್‌ ಅಕ್ಷರ್ ಪಟೇಲ್ ಮತ್ತೆ ತಂಡಕ್ಕೆ ಆಸರೆಯಾಗಬೇಕಿದೆ. ಬೌಲಿಂಗ್‌ನಲ್ಲಿ ಇಶಾಂತ್ ಶರ್ಮಾ, ಖಲೀಲ್ ಅಹಮ್ಮದ್, ಮುಕೇಶ್ ಕುಮಾರ್ ಮಾರಕ ದಾಳಿ ಸಂಘಟಿಸಬೇಕಿದೆ.

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಒಟ್ಟು 31 ಬಾರಿ ಮುಖಾಮುಖಿಯಾಗಿದ್ದು, ಬಹುತೇಕ ಸಮಾನ ಪೈಪೋಟಿ ಕಂಡಿವೆ. 31 ಪಂದ್ಯಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡವು 16 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ. ಇಂದಿನ ಪಂದ್ಯದಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವುದು ಕಾದು ನೋಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಪಂಜಾಬ್‌: ಪ್ರಭ್‌ಸಿಮ್ರನ್‌ ಸಿಂಗ್, ಶಿಖರ್ ಧವನ್‌(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ, ಸ್ಯಾಮ್ ಕರ್ರನ್‌, ಹಪ್ರೀತ್ ಬ್ರಾರ್, ಶಾರುಖ್‌ ಖಾನ್, ಸಿಕಂದರ್‌ ರಾಜಾ, ರಿಶಿ ಧವನ್, ರಾಹುಲ್‌ ಚಹರ್‌, ಆರ್ಶದೀಪ್ ಸಿಂಗ್, ನೇಥನ್ ಎಲ್ಲಿಸ್‌.

ಡೆಲ್ಲಿ: ಡೇವಿಡ್‌ ವಾರ್ನರ್‌(ನಾಯಕ), ಫಿಲ್‌ ಸಾಲ್ಟ್‌, ಮಿಚೆಲ್ ಮಾರ್ಷ್‌, ರೈಲಿ ರುಸ್ಸೌ, ಅಕ್ಷರ್‌ ಪಟೇಲ್, ಮನೀಶ್‌ ಪಾಂಡೆ, ಅಮನ್‌ ಖಾನ್‌, ಪ್ರವೀಣ್‌ ದುಬೆ, ಕುಲ್ದೀಪ್‌ ಯಾದವ್, ಮುಕೇಶ್‌ ಯಾದವ್, ಇಶಾಂತ್‌ ಶರ್ಮಾ, ಖಲೀಲ್‌ ಅಹಮ್ಮದ್.

ಪಂದ್ಯ ಆರಂಭ: ಸಂಜೆ 7.30ರಿಂದ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್

ಧರ್ಮಶಾಲಾ ಕ್ರೀಡಾಂಗಣದ ಪಿಚ್‌ ವೇಗಿಗಳಿಗೆ ಹೆಚ್ಚು ನೆರವು ನೀಡಲಿದ್ದು, ಇಲ್ಲಿ ಮೊದಲ ಇನ್ನಿಂಗ್ಸ್ ನ ಸರಾಸರಿ ಮೊತ್ತ 160 ರನ್‌. ಇಲ್ಲಿ ಚೇಸ್‌ ಮಾಡುವ ತಂಡ ಸಂಕಷ್ಟಎದುರಿಸಿದ ಉದಾಹರಣೆಗಳಿದ್ದರೂ, ಕಳೆದೆರಡು ಅಂ.ರಾ. ಟಿ20 ಪಂದ್ಯಗಳಲ್ಲಿ ಗುರಿ ಬೆನ್ನತ್ತಿದ ತಂಡ ಗೆದ್ದಿತ್ತು.

Leave A Reply

Your email address will not be published.