ಬೆಂಗಳೂರು: ದೇಶದ ವಿವಿಧ ಬ್ಯಾಂಕ್‌ಗಳಲ್ಲಿ 4545 ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಸ್ವೀಕರಿಸುವ ಗಡುವು ಜುಲೈ 21ರಂದು ಕೊನೆಗೊಳ್ಳಲಿದೆ.
ಆರಂಭದಲ್ಲಿ ಬಿಡುಗಡೆ ಮಾಡಿದ್ದ 4045 ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು. ನಂತರ IBPS ಮತ್ತೆ 500 ಹುದ್ದೆಗಳನ್ನು ಹೆಚ್ಚಿಸುವ ಮೂಲಕ ಅಧಿಸೂಚನೆಯನ್ನು ಪರಿಷ್ಕರಿಸಿತ್ತು. ಪದವಿ ಪೂರ್ಣಗೊಳಿಸಿರುವ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವ 20-28 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.