ದೆಹಲಿ: ಹೌದು ಇದುವರೆಗೆ ಬಿಯರ್ ಕುಡಿಬೇಕು ಅಂತ ಅನಿಸಿದ್ರೆ ಎಲ್ಲೋ ಹೋಗಿ ಖರೀದಿಸಬೇಕಿತ್ತು. ಆದರೆ ಇನ್ಮುಂದೆ ಮನೆಯಲ್ಲೇ ಕೇವಲ 2 ನಿಮಿಷದಲ್ಲಿ ಬಿಯರ್ ರೆಡಿ ಮಾಡಬಹುದು.!
ಅದು ಹೇಗೆ ಅಂತೀರ. ಬಿಯರ್ ಅನ್ನು ಕೇವಲ ಎರಡು ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕಂತನೇ ಕಂಪೆನಿಯೊಂದು ಮನೆಯಲ್ಲೇ ಬಿಯರ್ ತಯಾರಿಸಲು ಬಿಯರ್ ಪುಡಿಯನ್ನು ತಯಾರಿಸಿದೆ.ತಣ್ಣೀರಿನಲ್ಲಿ 2 ಚಮಚ ಪುಡಿಯನ್ನು ಬೆರೆಸಿದ ನಂತರ, ಎರಡು ನಿಮಿಷಗಳಲ್ಲಿ ಬಿಯರ್ ರೆಡಿ ಮಾಡಬಹುದು. ಇದು ವಿಶ್ವದ ಮೊದಲ ಬಿಯರ್ ಪುಡಿ ಎಂದು ಹೇಳಲಾಗುತ್ತದೆ. ಹಾಗೆಯೇ ಈ ವರ್ಷಾಂತ್ಯಕ್ಕೆ ಈ ಬಿಯರ್ ಪುಡಿ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.
ಜರ್ಮನಿಯಲ್ಲಿ ತಯಾರಾದ ಈ ಬಿಯರ್ ಪೌಡರ್ ಸದ್ಯ ಅಲ್ಲಿ ಮಾತ್ರ ಲಭ್ಯವಿದೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಮತ್ತು ಇತರ ದೇಶಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.