ಬೆಂಗಳೂರು: ಪ್ರಣಾಳಿಕೆಯು ಮತ ಗಳಿಕೆಯ ಸಾಧನವಲ್ಲ, ಜನರ ಆರ್ಥಿಕ, ಸಾಮಾಜಿಕ ಬದಲಾವಣೆ ತರಲು ಇರುವ ಸಾಧನವೆಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
2013ರಲ್ಲಿ 165 ಭರವಸೆ ನೀಡಿದ್ದೆವು. ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. 2018-19ರ ಬಜೆಟ್ ಪುಸ್ತಕದಲ್ಲಿ ಏನು ಹೇಳಿದ್ದೆವು, ಏನು ಮಾಡಿದ್ದೆವು ಎಂಬುದನ್ನು ನಮೂದಿಸಿದ್ದೇವೆ.
2018ರಲ್ಲಿ 600 ಭರವಸೆ ನೀಡಿದ್ದರು. 3 ವರ್ಷ 10 ತಿಂಗಳು ಅಧಿಕಾರ ನಡೆಸಿದರೂ ಕೇವಲ 55 ಭರವಸೆ(10%)ಗಳನ್ನು ಮಾತ್ರವೇ ಈಡೇರಿಸಿದ್ದಾರೆಂದು ಆರೋಪಿಸಿದ್ದಾರೆ.