Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ; ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

0

 

ಹೊಸಪೇಟೆ: 2023-24ನೇ ಸಾಲಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅಲ್ಪಸಂಖ್ಯಾತ ಸಮುದಾಯದ ಅರ್ಜಿದಾರರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಮೆಹಬೂಬ್ ಬಾಷಾ ವಿ. ಅವರು ತಿಳಿಸಿದ್ದಾರೆ.

ಯೋಜನೆಗಳ ವಿವರ:

ಶ್ರಮಶಕ್ತಿ ಸಾಲದ ಯೋಜನೆ: ಈ ಯೋಜನೆಯಲ್ಲಿ ರೂ.50 ಸಾವಿರಗಳ ಒಳಗೆ ಶೇ.4ರ ಬಡ್ಡಿ ದರದಲ್ಲಿ ಶೇ.50 ಸಬ್ಸಿಡಿ ಸಾಲ ಸೌಲಭ್ಯ.

ಶ್ರಮಶಕ್ತಿ(ವಿಶೇಷ ಮಹಿಳಾ) ಯೋಜನೆ: ಸಮುದಾಯದ ವಿಧವೆ, ವಿಚ್ಛೇಧಿತ, ಅವಿವಾಹಿತ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ರೂ.50 ಸಾವಿರಗಳ ಒಳಗೆ ಶೇ.4ರ ಬಡ್ಡಿ ದರದಲ್ಲಿ ಶೇ.50 ಸಬ್ಸಿಡಿ ಸಾಲ ಸೌಲಭ್ಯ.

ಅರಿವು ಯೋಜನೆ: ವೃತ್ತಿಪರ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷ ರೂ.50 ಸಾವಿರದಿಂದ 3 ಲಕ್ಷದವರೆಗೆ ಸಾಲ ವ್ಯಾಸಂಗ ಪೂರ್ಣಗೊಳಿಸಿದ 6 ತಿಂಗಳ ನಂತರ ಶೇ.2ರ ಸೇವಾ ಶುಲ್ಕದೊಂದಿಗೆ ಸಾಲ ಮರುಪಾವತಿ ಮಾಡಲು ಅವಕಾಶ.

ತರಬೇತಿ ಯೋಜನೆ: ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ ಉದ್ಯೋಗ. ಕಚೇರಿ. ಕಂಪನಿ, ಉದ್ದಿಮೆಗಳಲ್ಲಿ ಉದ್ಯೋಗ ದೊರಕಿಸುವ ಸಲುವಾಗಿ ಭಾರಿ ವಾಹನ ಚಾಲನೆ, ಶಾರ್ಟ್ ಹ್ಯಾಂಡ್, ಸೆಕ್ಯುರಿಟಿ ಸರ್ವಿಸ್ಸ್, ಬ್ಯೂಟಿ ಪಾರ್ಲರ್(ಪುರುಷರಿಗೆ ಮತ್ತು ಮಹಿಳೆಯರಿಗೆ) ಕೋರ್ಸ್ಗಳಿಗೆ ನಿಗಮದ ವತಿಯಿಂದ ತರಬೇತಿ ನೀಡಲಾಗುವುದು.

ಸ್ವಾವಲಂಬಿ ಸಾರಥಿ ಯೋಜನೆ: ಈ ಯೋಜನೆಯಲ್ಲಿ ಟ್ಯಾಕ್ಸಿ, ಗೂಡ್ಸ್ ವಾಹನ, ಪ್ಯಾಸೆಂಜರ್, ಆಟೋರಿಕ್ಷಾ ಖರೀದಿಸಲು ಫಲಾನುಭವಿಗಳಿಗೆ ಬ್ಯಾಂಕ್‌ನಿAದ ಸಾಲ ಮಂಜೂರಾತಿಯಾಗಿದ್ದಲ್ಲಿ ನಿಗಮದಿಂದ ವಾಹನದ ಮೌಲ್ಯದ ಶೇ.50 ರಷ್ಟು ಸಹಾಯಧನ ಗರಿಷ್ಠ ರೂ.3 ಲಕ್ಷವನ್ನು ನೀಡಲಾಗುವುದು.

ಗಂಗಾಕಲ್ಯಾಣ ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಕೊಳವೆಬಾವಿ ಕೊರೆಯಲು, ಪಂಪು ಅಳವಡಿಕೆ ಹಾಗೂ ನೀರಾವರಿ ವಿದ್ಯುದೀಕರಣಕ್ಕೆ ಸಂಪೂರ್ಣ ಸಹಾಯಧನ ಒದಗಿಸಲಾಗುವುದು.

ವಿದೇಶ ವ್ಯಾಸಂಗಕ್ಕೆ ಸಾಲ ಯೋಜನೆ: ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವ ವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಪಡೆಯಲು ರೂ.20 ಲಕ್ಷಗಳವರೆಗೆ ಸಾಲವನ್ನು ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಒದಗಿಸಲಾಗುವುದು.

ವೃತ್ತಿ ಪ್ರೋತ್ಸಾಹ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ಹಣ್ಣು, ಹಂಪಲು, ಕೋಳಿ ಮತ್ತು ಮೀನು ಮಾರಾಟ, ಏಳನೀರು, ಕಬ್ಬಿನ ಹಾಲು, ತಂಪು ಪಾನೀಯ ಮಾರಾಟ, ಬೇಕರಿ, ಲ್ಯಾಂಡರಿ, ಡ್ರೆöÊಕ್ಲೀನಿಂಗ್, ಹೇರ್ ಡ್ರೆöÊಸಿಂಗ್ ಸಲೂನ್, ಬ್ಯೂಟಿ ಪಾರ್ಲರ್, ವಾಡರ್ ವಾಶ್, ಪಂಕ್ಚರ್, ಮೆಕಾನಿಕ್ ಶಾಪ್, ದ್ವೀಚಕ್ರ, ತ್ರೀಚಕ್ರ ವಾಹನ ರಿಪೇರಿ, ಬಿದರಿ ವೇರ್ ಕೆಲಸ, ರೇಷ್ಮೆ ರೀಲಿಂಗ್ ಮತ್ತು ಟ್ವಸ್ಟಿಂಗ್, ಆಟಿಕೆ ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ದಿ ಪಡಿಸಲು ನಿಗಮದಿಂದ ಶೇ.50 ಸಹಾಯಧನದೊಂದಿಗೆ ರೂ.1 ಲಕ್ಷ ಸಾಲ ನೀಡಲಾಗುವುದು.

ಅರ್ಹತೆಗಳು: ಅರ್ಜಿದಾರರು ಕನಿಷ್ಠ 15 ವರ್ಷದಿಂದ ಜಿಲ್ಲೆಯಲ್ಲಿ ಖಾಯಂ ನಿವಾಸಿಯಾಗಿರಬೇಕು, ಕುಟುಂಬದ ವಾರ್ಷಿಕ ಆದಾಯ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 4.5 ಲಕ್ಷ ಮೀರಬಾರದು, ವಯಸ್ಸು 55 ವರ್ಷದ ಒಳಗಿರಬೇಕು, ಶೇ.33ರಷ್ಟು ಮಹಿಳೆಯರಿಗೆ, ಶೇ.3ರಷ್ಟು ಅಂಗವಿಕಲರಿಗೆ ಮೀಸಲಾತಿ ಇರುತ್ತದೆ. ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಪುಸ್ತಕ, ಯೋಜನಾ ವರದಿ ಸಮೇತ ಅರ್ಜಿದಾರರ ಹಾಗೂ ಜಾಮೀನುದಾರರ 2 ಭಾವಚಿತ್ರಗಳು ಸಲ್ಲಿಸಬೇಕು. ಈ ಹಿಂದೆ ನಿಗಮದ ಸೌಲಭ್ಯವನ್ನು ಪಡೆದವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ, ಅರ್ಜಿದಾರರು ಕಡ್ಡಾಯವಾಗಿ ಐಎಫ್‌ಎಸ್‌ಸಿ ಕೋಡ್ ಇರುವ ಬ್ಯಾಂಕ್ ಖಾತೆ ಪಾಸ್ ಬುಕ್ ಪ್ರತಿಯನ್ನು ಸಲ್ಲಿಸಬೇಕು.

https://kmdconline.karnataka.gov.in   ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೆ.25ರೊಳಗೆ ಅಥವಾ ಅರ್ಜಿಯ ಪ್ರತಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ನಿಗಮದ ಕಚೇರಿಗೆ ಸೆ.27ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ತಾಲ್ಲೂಕು ಕಚೇರಿಯ ಮೊದಲನೇ ಮಹಡಿಯ ಕೊಠಡಿ ಸಂ.6ರಲ್ಲಿನ ನಿಗಮದ ಕಚೇರಿಗೆ ಭೇಟಿ ನೀಡಬಹುದು. ಮಾಹಿತಿಗಾಗಿ ಮೊ.8277944207 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Leave A Reply

Your email address will not be published.