ಚಿತ್ರದುರ್ಗ: 2023-24ನೇ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರ ಏಳಿಗೆಗಾಗಿ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು https://kmdconline.karnataka.gov.in ವೆಬ್‍ಸೈಟ್ ಮೂಲಕ ಸೆಪ್ಟೆಂಬರ್ 25 ರೊಳಗೆ ಸಲ್ಲಿಸಬೇಕು ಹಾಗೂ ಅರ್ಜಿ ಪ್ರಿಂಟ್ ತೆಗೆದು ಅಗತ್ಯ ದಾಖಲೆಗಳನ್ನು ಹಾರ್ಡ್ ಪ್ರತಿ ಮೂಲಕ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.
ನಿಗಮದ ವಿವಿಧ ಯೋಜನೆಗಳ ವಿವರ ಇಂತಿದೆ. ಶ್ರಮ ಶಕ್ತಿ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಸಾಂಪ್ರದಾಯಕ ಕುಶಲಕರ್ಮಿಗಳಿಗೆ ಮತ್ತು ಕುಲಕಸುಬುದಾರರಿಗೆ ಅವರ ವೃತ್ತಿ ಕೌಶಲ್ಯವನ್ನು ಅಭಿವೃದ್ದಿ ಪಡಿಸಿಕೊಳ್ಳಲು ನಿಗಮದಿಂದ ಕಡಿಮೆ ಬಡ್ಡಿದರದಲ್ಲಿ ಅಂದರೆ ಶೇ 4ರ ಬಡ್ಡಿ ದರದಲ್ಲಿ 36 ಕಂತುಗಳಲ್ಲಿ ಮರುಪಾವತಿಸುವ ಷರತ್ತಿನೊಂದಿಗೆ ರೂ.50,000 ವರೆಗೆ ಸಾಲ ಸೌಲಭ್ಯ ನೀಡಲಾಗುವುದು ಇದರಲ್ಲಿ ಅರ್ಜಿದಾರರಿಗೆ ಶೇ. 50% ರ ಬ್ಯಾಕ್ ಎಂಡ್ ಸಹಾಯಧನವಾಗಿರುತ್ತದೆ.
ಶ್ರಮಶಕ್ತಿ (ವಿಶೇಷ ಮಹಿಳಾ ಯೋಜನೆ): ಅಲ್ಪಸಂಖ್ಯಾತರ ಸಮುದಾಯದ ವಿಧವೆ ವಿಚ್ಚೇದಿತ ಅವಿವಾಹಿತ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಯೋಜನೆಯಾಗಿದೆ. ಯೋಜನೆಯಡಿ ಶೇ 4ರ ಬಡ್ಡಿದರದಲ್ಲಿ ರೂ. 25,000/- ಸಾಲ ಮತ್ತು ರೂ 25,000/- ಸಹಾಯಧನ ಸೇರಿ ಒಟ್ಟು ರೂ. 50,000/- ವಿವಿಧ ಆರ್ಥಿಕ ಚಟುವಟಿಗಳನ್ನು ಕೈಗೆತ್ತಿಕೊಳ್ಳಲು ಅಥವಾ ಅಭಿವೃದ್ದಿ ಪಡಿಸಿಕೊಳ್ಳಲು ಸಾಲ ಮತ್ತು ಸಹಾಯಧನವನ್ನು ನೀಡಲಾಗುವುದು.
ಗಂಗಾ ಕಲ್ಯಾಣ ಯೋಜನೆ: ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯ ಬಯಸುವ ಫಲಾನುಭವಿಗಳು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ಪ್ರತಿ ಫಲಾನುಭವಿ ಕನಿಷ್ಠ 1ಎಕರೆ 20 ಗುಂಟೆ (1ಎಕರೆ 50 ಸೆಂಟ್ಸ್) ಎಕರೆಯಿಂದ ಗರಿಷ್ಠ 5 ಎಕರೆವರೆಗೆ ಖುಷ್ಕಿ ಜಮೀನು ಹೊಂದಿರುವ ಮತ್ತು ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.96,000/- ಮೀರಿರದ, ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರುವ ಅರ್ಜಿದಾರರಿಗೆ ನಿಗಮದಿಂದ ರೂ 3 ಲಕ್ಷ ಸಹಾಯಧನದಲ್ಲಿ ಕೋಳವೆಬಾವಿ ಸೌಲಭ್ಯ ನೀಡಲಾಗುತ್ತದೆ.
ಟ್ಯಾಕ್ಸಿ, ಗೂಡ್ಸ್, ಆಟೋರಿಕ್ಷ ವಾಹನ ಖರೀದಿಸಲು ಸಹಾಯಧನ ಯೋಜನೆ: ಈ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಹಾಯಧನದೊಂದಿಗೆ ಅನುಷ್ಠಾನಗೊಳಿಲಾಗುತ್ತದೆ. ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿ ಬ್ಯಾಂಕ್‍ಗಳಿಂದ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಟ್ಯಾಕ್ಸಿ, ಗೂಡ್ಸ್, ಆಟೋರಿಕ್ಷ ವಾಹನ ಖರೀಧಿಸಲು ವಾಹನದ ಮೌಲ್ಯದ ಶೇ.33% ರಷ್ಟು ಸಹಾಯಧನ ಗರಿಷ್ಠ ರೂ 3ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ.
ವೃತ್ತಿ ಪ್ರೋತ್ಸಹ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ಹಣ್ಣು ಹಂಪಲು ಮಾರಾಟ, ಕೋಳಿ ಮತ್ತು ಮೀನು ಮಾರಾಟಟ, ಬೇಕರಿ, ಲ್ಯಾಂಡ್ರಿ, ಡ್ರೈ ಕ್ಲೀನಿಂಗ್, ಬ್ಯೂಟಿ ಪಾರ್ಲರ್, ವಾಟರ್ ವಾಶ್ ಪಂಕ್ಚರ್ ಮ್ಯಾಕನಿಕ್ ಶಾಫ್ ಬಿದರಿ ಕೆಲಸ, ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ದಿ ಪಡಿಸಲು ನಿಗಮದಿಂದ ಶೇ 50% ಸಹಾಯಧನ ನೀಡಲಾಗುವುದು.
ಅರಿವು ಸಿಇಟಿ,ನೀಟ್ ವಿಧ್ಯಾಭ್ಯಾಸ ಸಾಲ ಯೋಜನೆ ನವೀಕರಣ (ರಿನ್ಯೂವಲ್): ಈ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ, ನೀಟ್ ಮುಖಾಂತರ ಪದವಿ ಮತ್ತು ವೃತ್ತಿಪರ ಕೋರ್ಸ್‍ಗಳಾದ ಎಂ.ಬಿ.ಬಿ.ಎಸ್, ಎಂ.ಡಿ, ಬಿ.ಇ, ಬಿ.ಟೆಕ್, ಎಂ.ಎ, ಎಂ.ಟೆಕ್, ಬಿ.ಡಿ.ಎಸ್, ಎಂ.ಡಿಎಸ್, ಬಿ.ಅಯುಷ್, ಎಂ. ಅಯುಷ್, ಬಿ.ಅರ್ಕ್, ಎಂ.ಬಿ.ಎ, ಎಂ.ಸಿ.ಎ, ಎಲ್.ಎಲ್.ಬಿ, ಬಿ.ಎಸ್.ಸಿ ತೋಟಗಾರಿಕೆ, ಕೃಷಿ ಇಂಜಿನಿಯರಿಂಗ್, ಡೈರಿ ತಂತ್ರಜ್ಞಾನ, ಅರಣ್ಯ, ಪಶುವೈದ್ಯಕೀಯ ಮತ್ತು ಪ್ರಾಣಿ ತಂತ್ರಜ್ಞಾನ, ಮೀನುಗಾರಿಕೆ, ರೇಷ್ಮೆ ಕೃಷಿ, ಗೃಹ ಸಮುದಾಯ ವಿಜ್ಞಾನ, ಆಹಾರ ಪೋಷಣೆ ಮತ್ತು ಆಹಾರ ಪದ್ದತಿ, ಬಿ. ಫಾರ್ಮಾ, ಎಂ. ಫಾರ್ಮಾಗಳಲ್ಲಿ ಆಯ್ಕೆಯಾಗಿರುವಂತಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ನವೀಕರಣ(ರಿನ್ಯೂವಲ್) ಸಾಲ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸಲಾಗುವುದು.
ಸಮುದಾಯ ಆಧಾರಿತ ತರಬೇತಿ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವ ಉದ್ಯೋಗ ಕಚೇರಿ ಕಂಪನಿ ಉದ್ದಿಮೆಗಳಲ್ಲಿ ಉದ್ಯೋಗ ದೊರಕಿಸುವ ಸಲುವಾಗಿ ಭಾರಿ ವಾಹನ ಚಾಲನೆ ಶಾರ್ಟ್‍ಹ್ಯಾಂಡ್, ಸೆಕ್ಯೂರಿಟಿ ಸರ್ವಿಸಸ್ ಬ್ಯೂಟಿ ಪಾರ್ಲರ್ (ಪುರುಷರಿಗೆ ಮತ್ತು ಮಹಿಳೆಯರಿಗೆ) ಕೋರ್ಸ್‍ಗಳಿಗೆ ನಿಗಮದ ವತಿಯಿಂದ ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ 8277944213 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.